ಭಾರತದ ಡೋಪಿಂಗ್ ಶೇಮ್: 2009ರಿಂದೀಚೆಗೆ 687 ಅಥ್ಲೀಟ್‌ಗಳಿಗೆ ನಿಷೇಧ

ಶುಕ್ರವಾರ, 29 ಜುಲೈ 2016 (15:25 IST)
ನರಸಿಂಗ್ ಯಾದವ್ ಮತ್ತು ಇಂದರ್‌ಜೀತ್ ಸಿಂಗ್ ಇತ್ತೀಚೆಗೆ ಎದುರಿಸಿದ ಸಮಸ್ಯೆಗಳು ಉದ್ದೀಪನ ಮದ್ದು ಸೇವನೆ ವಿವಾದವನ್ನು ಬೆಳಕಿಗೆ ತಂದಿದೆ. ಆದರೆ ಉದ್ದೀಪನಾ ಮದ್ದು ಸೇವನೆಯಲ್ಲಿ 2009ರಿಂದ ಜನವರಿ 1ರಿಂದೀಚೆಗೆ 687 ಭಾರತೀಯ ಅಥ್ಲೀಟ್‌ಗಳನ್ನು ನಿಷೇಧಿಸಲಾಗಿರುವ ವಿಷಯ ಆಘಾತಕಾರಿಯಾಗಿದೆ.
 
2012ರಲ್ಲಿ ಒಂದೇ ಬಾರಿ ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆ ಸಂಸ್ಥೆ 176 ಅಥ್ಲೀಟ್‌ಗಳಿಗೆ ನಿಷೇಧ ವಿಧಿಸಿದೆ. ಆದರೆ ವಿವಿಧ ಸಂಸ್ಥೆಗಳು ಅಳವಡಿಸಿದ ಕಠಿಣ ಕ್ರಮಗಳಿಂದಾಗಿ ಆ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ.
 
2016ರಲ್ಲಿ 72 ಅಥ್ಲೀಟ್‌ಗಳು ಡೋಪಿಂಗ್ ಸಂಬಂಧಿಸಿದ ಆರೋಪಗಳನ್ನು ಹೊತ್ತಿದ್ದಾರೆ. ಅವರ ಪೈಕಿ 56 ಮಂದಿ ಕಳೆದ ವರ್ಷ ಎಸಗಿದ ಉಲ್ಲಂಘನೆಗಳನ್ನು ಈ ವರ್ಷವೂ ಮುಂದುವರಿಸಿದ್ದಾರೆ. ಈ ಸಂಖ್ಯೆಗೆ ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು (266) ಮತ್ತು ವೇಟ್ ಲಿಫ್ಟರ್‌ಗಳು(169) ಪ್ರಮುಖ ಕೊಡುಗೆದಾರರು.
 
ಅಥ್ಲೀಟ್‌ಗಳ ಬುದ್ಧಿವಂತಿಕೆಯ ಪರೀಕ್ಷೆ ಮತ್ತು ಅವರ ಜೈವಿಕ ಪಾಸ್‌ಪೋರ್ಟ್‌ ಸಿದ್ಧಪಡಿಸುವ ಮೂಲಕ ನಿಗಾವಹಿಸಲು ಮಹತ್ವ ನೀಡಬೇಕು. ಅಥ್ಲೀಟ್‌ಗಳಿಗೆ ಉದ್ದೀಪನಾ ಮದ್ದು ಸೇವನೆ ಕುರಿತು ಇನ್ನೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನಾಡಾದ ಮಾಜಿ ಮುಖ್ಯಸ್ಥ ಮುಕುಲ್ ಚಜರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ