ಕಾಮನ್ ವೆಲ್ತ್ ಗೇಮ್ಸ್: ಭಾರತಕ್ಕೆ ಸಿಕ್ಕಿತು ಎರಡು ಐತಿಹಾಸಿಕ ಚಿನ್ನ

ಬುಧವಾರ, 3 ಆಗಸ್ಟ್ 2022 (08:20 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಎರಡು ಐತಿಹಾಸಿಕ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಲಾನ್ ಬೌಲ್ಸ್ ನಲ್ಲಿ ಮೊದಲ ಬಾರಿಗೆ ಫೈನಲ್ ಗೇರಿ ಸಾಧನೆ ಮಾಡಿದ್ದ ಭಾರತದ ವನಿತೆಯರು ನಿನ್ನೆಯ ಫೈನಲ್ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ  ಚಿನ್ನ ಗೆದ್ದು ಇತಿಹಾಸ ಬರೆದಿದ್ದಾರೆ.

ಇದಲ್ಲದೆ, ಟೇಬಲ್ ಟೆನಿಸ್ ನಲ್ಲೂ ದಾಖಲೆಯಾಗಿದೆ. ಪುರುಷರ ಟಿಟಿಯಲ್ಲಿ ಭಾರತ ಬಂಗಾರದ ಭೇಟೆಯಾಡಿದೆ. 2018 ರ ಕಾಮನ್ ವೆಲ್ತ್ ಗೇಮ್ಸ್ ಬಳಿಕ ಮತ್ತೆ ಈ ಬಾರಿ ಚಿನ್ನ ಗೆದ್ದು ಸಾಧನೆ ಮಾಡಿದೆ.  ಆದರೆ ಮಿಕ್ಸೆಡ್ ವಿಭಾಗದ ಬ್ಯಾಡ್ಮಿಂಟನ್‍ ನಲ್ಲಿ ಮಾತ್ರ ಫೈನಲ್ ನಲ್ಲಿ ಭಾರತ ನಿರಾಸೆ ಅನುಭವಿಸಿತು. ಫೈನಲ್ ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನೊಂದೆಡೆ ಪುರುಷರ 96 ಕೆ.ಜಿ. ವಿಭಾಗದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ