ಕಾಮನ್ ವೆಲ್ತ್ ಗೇಮ್ಸ್: ಪೂನಂ ಯಾದವ್ ಗೆ ನಿರಾಸೆ, ಲಾಂಗ್ ಜಂಪ್ ನಲ್ಲಿ ಭರವಸೆ

ಮಂಗಳವಾರ, 2 ಆಗಸ್ಟ್ 2022 (16:31 IST)
ಬರ್ಮಿಂಗ್ ಹ್ಯಾಮ್: 2018 ರ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕದ ವಿಜೇತೆ ಭಾರತದ ಮಹಿಳಾ ವೈಟ್ ಲಿಫ್ಟರ್ ಪೂನಂ ಯಾದವ್ 98 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಆಘಾತ ಅನುಭವಿಸಿದ್ದಾರೆ.

ಒಟ್ಟು ಮೂರು ಪ್ರಯತ್ನದಲ್ಲೂ ಪೂನಂ ವಿಫಲಗೊಂಡು ಪದಕದ ಕನಸು ಭಗ್ನ ಮಾಡಿಕೊಂಡರು. ಒಟ್ಟು 116 ಕೆ.ಜಿ. ಭಾರ ಎತ್ತಲು ಹೋದ ಪೂನಂ ಮೂರೂ ಯತ್ನದಲ್ಲಿ ರೆಡ್ ಸಿಗ್ನಲ್ ಪಡೆದಿದ್ದಾರೆ.

ಆದರೆ ಲಾಂಗ್ ಜಂಪ್ ನಲ್ಲಿ ಭಾರತದ ಇಬ್ಬರು ತಾರೆಯರು ಫೈನಲ್ ಹಂತಕ್ಕೆ ತಲುಪಿ ಭರವಸೆ ಮೂಡಿಸಿದ್ದಾರೆ. ಭಾರತದ ಮುರಲಿ ಶ್ರೀಶಂಕರ್ (8.05 ಮೀ.) 12 ಮಂದಿ ಫೈನಲಿಸ್ಟ್ ಗಳ ಪೈಕಿ ಮೊದಲ ಸ್ಥಾನ ಪಡೆದರೆ ಮತ್ತೊಬ್ಬ ಭಾರತೀಯ ತಾರೆ ಮೊಹಮ್ಮದ್ ಅನೀಸ್ ಸಹಿಯಾ (7.68ಮೀ. ಎತ್ತರ) ಫೈನಲ್ ಹಂತದಲ್ಲಿ 8 ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಫೈನಲ್ ಸುತ್ತಿನಲ್ಲಿ ಇವರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ