ಒಲಿಂಪಿಕ್ಸ್ ನಲ್ಲಿ ಭಾರತೀಯರಿಗೆ ಊಟದ್ದೇ ಚಿಂತೆ

ಬುಧವಾರ, 21 ಜುಲೈ 2021 (12:27 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾ ಮಹಾಹಬ್ಬದಲ್ಲಿ ಪಾಲ್ಗೊಳ್ಳಲು ಕ್ರೀಡಾ ಗ್ರಾಮಕ್ಕೆ ಬಂದಿಳಿದಿರುವ ಭಾರತೀಯ ಕ್ರೀಡಾಳುಗಳಿಗೆ ಇಲ್ಲಿ ಊಟದ್ದೇ ಸಮಸ್ಯೆಯಾಗಿದೆ.


ಹಲವು ಕ್ರೀಡಾಳುಗಳಿಗೆ ಇಲ್ಲಿ ಆಹಾರವೇ ಸೆಟ್ ಆಗುತ್ತಿಲ್ಲ. ಈ ಕಾರಣಕ್ಕೆ ಹಲವರು ಊಟ ಸಾಮಾನ್ಯ ಎಂದರೆ ಕೆಲವರು ಮಾತ್ರ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಗೆ ಕೊರೋನಾ ಭೀತಿಯೂ ಇದೆ. ಅಲ್ಲದೆ, ಇಲ್ಲಿನ ತಾಪಮಾನಕ್ಕೆ ಹೊಂದಿಕೊಳ್ಳುವುದೂ ಕಷ್ಟವಾಗುತ್ತದೆ. ಇನ್ನು ಕೆಲವರಿಗೆ ಬಿಸಿ ನೀರಿನ ಸಮಸ್ಯೆಯಾಗಿದೆ. ಇಲ್ಲಿ ಬಿಸಿ ನೀರು ಸಿಗದೇ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ. ಇದೆಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಒಲಿಂಪಿಕ್ಸ್ ಗೆ ತಯಾರಾಗುವುದೇ ಭಾರತೀಯ ಆಟಗಾರರಿಗೆ ಸವಾಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ