ಕಂಬಳ ಸ್ಟಾರ್ ಶ್ರೀನಿವಾಸ್ ಗೌಡ ಸಾಯ್ ನಲ್ಲಿ ತರಬೇತಿ ಪಡೆಯಲ್ಲ ಎಂದಿದ್ಯಾಕೆ ಗೊತ್ತಾ?

ಮಂಗಳವಾರ, 18 ಫೆಬ್ರವರಿ 2020 (09:58 IST)
ಬೆಂಗಳೂರು: ಕಂಬಳ ಓಟದಲ್ಲಿ ವೇಗವಾಗಿ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ರನ್ನೇ ಮೀರಿಸಿದ ಮೂಡಬಿದಿರೆಯ ಶ್ರೀನಿವಾಸ್ ಗೌಡ ಸಾಯ್ ನಲ್ಲಿ ತರಬೇತಿ ಪಡೆಯಲು ನಿರಾಕರಿಸಿದ್ದು ಯಾಕೆ ಗೊತ್ತಾ?


ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಿಫಾರಸ್ಸಿನ ಮೇರೆಗೆ ಶ್ರೀನಿವಾಸ್ ಗೌಡ ಅವರಿಗೆ ಬೆಂಗಳೂರಿನ ಕ್ರೀಡಾ ತರಬೇತಿ ಕೇಂದ್ರ ಸಾಯ್ ನಲ್ಲಿ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಬೆಂಗಳೂರಿಗೆ ಬರಲು ಅವರಿಗೆ ರೈಲ್ವೇ ಟಿಕೆಟ್ ಕೂಡಾ ಬುಕ್ ಮಾಡಲಾಗಿತ್ತು.

ಆದರೆ ಶ್ರೀನಿವಾಸ್ ಗೌಡ ಈ ಆಫರ್ ನಿರಾಕರಿಸಿ ಶಾಕ್ ನೀಡಿದ್ದರು. ಇದಕ್ಕೆ ಅವರು ನೀಡಿರುವ ಕಾರಣವೇನು ಗೊತ್ತಾ? ‘ಸರ್ಕಾರ ನನ್ನನ್ನು ಗುರುತಿಸಿವುದು ಸಂತಸ ತಂದಿದೆ. ಯಜಮಾನರು ಅಷ್ಟು ವೇಗವಾಗಿ ಓಡುವಂತೆ ಕೋಣಗಳನ್ನು ಸಾಕಿದ್ದರಿಂದ ನನಗೆ ವೇಗವಾಗಿ ಓಡಲು ಸಾಧ‍್ಯವಾಯಿತು. ಇನ್ನೂ ಈ ರೀತಿ ಓಡಬಲ್ಲೆ. 12 ಓಟಗಳ ಸ್ಪರ್ಧೆಯಿಂದ ನನಗೆ 35 ಪದಕ ಸಿಕ್ಕಿದೆ. ಇನ್ನೂ ಮೂರ್ನಾಲ್ಕು ಕಂಬಳ ಇದೆ. ಅದೆಲ್ಲಾ ಮುಗಿದ ಮೇಲೆ ತರಬೇತಿಗೆ ಹಾಜರಾಗುವೆ’ ಎಂದು ಕಂಬಳ ಸ್ಟಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಸ್ವತಃ ಸಿಎಂ ಯಡಿಯೂರಪ್ಪ 3 ಲಕ್ಷ ರೂ.ಗಳ ಚೆಕ್ ನೀಡಿ ಶ್ರೀನಿವಾಸ್ ಗೌಡರಿಗೆ ಸನ್ಮಾನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ