ಡ್ಯಾನ್ಸರ್ ಶಕ್ತಿ ಮೋಹನ್ ಗೆ ಪ್ರಪೋಸ್ ಮಾಡಿದ ನೀರಜ್ ಚೋಪ್ರಾ

ಮಂಗಳವಾರ, 28 ಸೆಪ್ಟಂಬರ್ 2021 (10:39 IST)
ಮುಂಬೈ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೇಲೆ ನೀರಜ್ ಚೋಪ್ರಾ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ಮೋಸ್ಟ್ ಹ್ಯಾಂಡ್ಸಮ್ ಹುಡುಗ ಈಗ ಡ್ಯಾನ್ಸ್ ಪ್ಲಸ್ ವೇದಿಕೆಯಲ್ಲಿ ಡ್ಯಾನ್ಸರ್ ಶಕ್ತಿ ಮೋಹನ್ ಗೆ ಪ್ರಪೋಸ್ ಮಾಡಿದ್ದಾರೆ!


ಹಿಂದಿ ಕಿರುತೆರೆಯ ಯಡ್ಯಾನ್ಸ್ ಪ್ಲಸ್ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ನೀರಜ್ ಚೋಪ್ರಾರನ್ನು ವೇದಿಕೆ ಆಹ್ವಾನಿಸಿದ ಶಕ್ತಿ ಮೋಹನ್ ವಿಶಿಷ್ಟವಾಗಿ ಪ್ರಪೋಸ್ ಮಾಡಲು ಸವಾಲು ಹಾಕಿದರು.

ಅದರಂತೆ ನೀರಜ್ ಚೋಪ್ರಾ ತಮ್ಮದೇ ಶೈಲಿಯಲ್ಲಿ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದಾರೆ. ಇದೆಲ್ಲಾ ನಡೆದಿರುವುದು ತಮಾಷೆಗಾಗಿ. ಈ ಎಪಿಸೋಡ್ ಇನ್ನಷ್ಟೇ ಪ್ರಸಾರವಾಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ