ಮತ್ತೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ಭಾನುವಾರ, 19 ಜೂನ್ 2022 (09:10 IST)
ನವದೆಹಲಿ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕುಒರ್ಟೆನ್ ಗೇಮ್ಸ್ ನಲ್ಲಿ ಚಿನ್ನದ  ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಈ ಮೂಲಕ ಈ ಸೀಸನ್ ನ ಮೊದಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಒಟ್ಟು 86.69 ಮೀ. ದೂರ ಎಸೆದ ನೀರಜ್ ಚೋಪ್ರಾ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದರು.

ಇದಕ್ಕೂ ಮೊದಲು ಕಳೆದ ವಾರ ಪಾವೊನುರ್ಮಿ ಗೇಮ್ಸ್ ನಲ್ಲಿ 89.30 ಮೀ. ದೂರ ಎಸೆದು ನೀರಜ್ ರಾಷ್ಟ್ರೀಯ ದಾಖಲೆ ಮಾಡಿದ್ದರು. ಒಟ್ಟು 90 ಮೀ. ದೂರ ಎಸೆಯುವುದೇ ತಮ್ಮ ಗುರಿ ಎಂದು ನೀರಜ್ ಹೇಳಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ