ಜ್ವಾವೆಲಿನ್ ಥ್ರೋನಲ್ಲಿ ವಿಶ್ವ ನಂ.2 ಆದ ನೀರಜ್ ಚೋಪ್ರಾ

ಗುರುವಾರ, 12 ಆಗಸ್ಟ್ 2021 (10:35 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ವಿಶ್ವ ಜ್ವಾವೆಲಿನ್ ಥ್ರೋ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.


23 ವರ್ಷದ ನೀರಜ್ ಚೋಪ್ರಾ ಈಗ ಜರ್ಮನಿಯ ಜೋನಾಸನ್ ವೆಟ್ಟರ್ ಗಿಂತ ಕೇವಲ ಒಂದು ರ್ಯಾಂಕಿಂಗ್ ಕೆಳಗಿದ್ದಾರಷ್ಟೇ. ವೆಟ್ಟರ್ ಒಲಿಂಪಿಕ್ಸ್ ನಲ್ಲಿ 9 ನೇ ಸ್ಥಾನ ಪಡೆಯಲು ಶಕ್ತರಾಗಿದ್ದರಷ್ಟೇ.

ಒಲಿಂಪಿಕ್ಸ್ ನಲ್ಲಿ ನೀರಜ್ 87.58 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದಿದ್ದರು.ಇದೀಗ 1315 ಅಂಕ ಪಡೆದಿರುವ ನೀರಜ್ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ