ಕಾಮನ್ ವೆಲ್ತ್ ಗೇಮ್ಸ್ 2022: ಕೊನೆ ಕ್ಷಣದಲ್ಲಿ ಭಾರತದ ಧ್ವಜಾಧಾರಿಯಾಗುವ ಅವಕಾಶ ಪಿ.ವಿ. ಸಿಂಧುಗೆ
ಈ ಬಾರಿ ಭಾರತೀಯ ಪಥ ಸಂಚಲನ ವೇಳೆ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಧ್ವಜ ಹಿಡಿದು ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ನೀರಜ್ ಗೆ ಗಾಯವಾಗಿದ್ದರಿಂದ ಕೊನೆ ಗಳಿಗೆಯಲ್ಲಿ ಕೂಟದಿಂದ ಹೊರಬಿದ್ದಿದ್ದಾರೆ.
ಹೀಗಾಗಿ ನೀರಜ್ ಕೈ ತಪ್ಪಿದ ಗೌರವ ಪಿ. ವಿ. ಸಿಂಧುಗೆ ಒಲಿದಿದೆ. ಎರಡು ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ಬಾರಿ ಭಾರತಕ್ಕೆ ಚಿನ್ನ ಗೆದ್ದು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.