ಪದ್ಮ ಪ್ರಶಸ್ತಿ ರೇಸ್ ನಲ್ಲಿ ಪಿ.ವಿ ಸಿಂಧು, ಸಾಕ್ಷಿ ಮಲಿಕ್

ಮಂಗಳವಾರ, 24 ಜನವರಿ 2017 (09:22 IST)
ನವದೆಹಲಿ: ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಭಾರತದ ಶ್ರೇಷ್ಠ ಪದ್ಮ ಪ್ರಶಸ್ತಿ ಘೋಷಣೆಯಾಗುತ್ತದೆ. ಈ ಬಾರಿ ಈ ಪ್ರಶಸ್ತಿ ಪಡೆಯುವವರ ಪಟ್ಟಿಯಲ್ಲಿ ಒಲಿಂಪಿಕ್ ತಾರೆಯರಾದ ಪಿವಿ ಸಿಂಧು ಮತ್ತು ಸಾಕ್ಷಿ ಮಲಿಕ್ ಇದ್ದಾರೆ.

 
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು 2016 ನೇ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಜತೆಗೆ ಒಲಿಂಪಿಕ್ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡಾ ಅಂತಿಮ ಪಟ್ಟಿಯಲ್ಲಿದ್ದಾರೆ. ಒಂದು ವೇಳೆ ಸಾಕ್ಷಿ ಪ್ರಶಸ್ತಿ ಗೆದ್ದರೆ ಪದ್ಮ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕುಸ್ತಿ ಪಟು ಎಂಬ ದಾಖಲೆ ಮಾಡಲಿದ್ದಾರೆ.

ಇವರಿಬ್ಬರು ಕ್ರೀಡಾಳುಗಳ ಜತೆಗೆ ಭಾರತಕ್ಕೆ ಹಲವು ಬ್ಯಾಡ್ಮಿಂಟನ್ ಕಲಿಗಳನ್ನು ತರಬೇತುಗೊಳಿಸಿ ಕೊಟ್ಟ ಕೋಚ್ ಗೋಪಿಚಂದ್ ಕೂಡಾ ಬಹುತೇಕ ಪದ್ಮ ಪ್ರಶಸ್ತಿ ಪಡೆಯುವುದು ಖಚಿತವಾಗಿದೆ. ಗೋಪಿಚಂದ್ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಹಾಗೂ ಪಿ. ಕಶ್ಯಪ್ ರಂತಹ ಆಟಗಾರರಿಗೆ ಕೋಚ್ ಆಗಿದ್ದವರು. ಗಣರಾಜ್ಯೋತ್ಸವ ದಿನ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ