ಬಿಲ್ಲುಗಾರಿಕೆ: ದೀಪಿಕಾ ಕುಮಾರಿಗೆ 20ನೇ ಸ್ಥಾನ, ಬೀಸಿದ ಗಾಳಿಯಿಂದ ಕಳಪೆ ಪ್ರದರ್ಶನ

ಶನಿವಾರ, 6 ಆಗಸ್ಟ್ 2016 (16:02 IST)
ರಿಯೊ ಡಿ ಜನೈರೊ: ಅರ್ಹತಾ ಸುತ್ತಿನಲ್ಲಿ 20ನೇ ಸ್ಥಾನ ಪಡೆದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ತೀವ್ರ ನಿರಾಶೆ ವ್ಯಕ್ತಪಡಿಸಿ, ತಮ್ಮ ಕಳಪೆ ಪ್ರದರ್ಶನಕ್ಕೆ ಬೀಸುತ್ತಿದ್ದ ಗಾಳಿಯೇ ಕಾರಣವೆಂದು ಹೇಳಿದ್ದಾರೆ. ದೀಪಿಕಾ 720 ಸ್ಕೋರ್ ಪೈಕಿ 640 ಸ್ಕೋರ್ ಮಾಡಲು ಸಾಧ್ಯವಾಗಿದ್ದು, 20ನೇ ಸ್ಥಾನಕ್ಕೆ ಮಾತ್ರ ಅರ್ಹರಾಗಿದ್ದಾರೆ. ಅನುಭವಿ ಬೊಂಬಾಲ್ಯಾ ದೇವಿ ಕೂಡ 638 ಸ್ಕೋರ್ ಮಾಡಿ 24ನೇ ಸ್ಥಾನ ಮತ್ತು ಲಕ್ಷ್ಮಿರಾಣಇ ಮಾಜ್ಹಿ 614 ಪಾಯಿಂಟ್‌ಗಳೊಂದಿಗೆ 43ನೇ ಸ್ಥಾನಕ್ಕೆ ಕುಸಿದರು.
 
ಗಾಳಿಯೊಂದನ್ನು ಬಿಟ್ಟರೆ ಬೇರಾವುದೂ ತಪ್ಪಿರಲಿಲ್ಲ. ನಾನು ಸರಿಯಾಗಿ ಬಿಲ್ಲನ್ನು ಹೂಡಿದ್ದರೂ ಮಿಸ್ ಆಗಿದೆ. ಆದರೆ ಇದನ್ನು ನಿರೀಕ್ಷಿಸಿರಲಿಲ್ಲವಾದರೂ ನಾನೇನೂ ಮಾಡಲು ಆಗುವುದಿಲ್ಲ ಎಂದು ದೀಪಿಕಾ ಸ್ಪರ್ಧೆಯ ಬಳಿಕ ಹೇಳಿದರು. 
 
ಮಹಿಳಾ ಬಿಲ್ಲುಗಾರರ ತಂಡವು ಒಟ್ಟು 1892 ಪಾಯಿಂಟ್ ಕಲೆಹಾಕಿದ್ದು, ನಾಳೆ 16ರ ಮೊದಲ ಸುತ್ತಿನಲ್ಲೇ ಎಲಿಮಿನೇಷನ್ ಹಂತ ಆರಂಭವಾಗಲಿದೆ. 10ನೇ ಶ್ರೇಯಾಂಕದ ಕೊಲಂಬಿಯಾ ವಿರುದ್ಧ ಮಹಿಳಾ ತಂಡವು ಆಡಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ