ಮುಂದಿನ ವಾರ ಬಹು ನಿರೀಕ್ಷಿತ ಒಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದ್ದು, ಭಾರತ ತಂಡದ ಸ್ಪರ್ಧಾಳುಗಳು ರಿಯೋ ಒಲಿಂಪಿಕ್ ಗ್ರಾಮಕ್ಕೆ ಬರಲಾರಂಭಿಸಿದ್ದಾರೆ. ಆಗಸ್ಟ್ 5ರಂದು ಒಲಿಂಪಿಕ್ ಉದ್ಘಾಟನೆಯಾಗಲಿದ್ದು, ಈಗಾಗಲೇ ಭಾರತ ತಂಡದ ಅರ್ಧದಷ್ಟು ಮಂದಿ ರಿಯೊಗೆ ಆಗಮಿಸಿದ್ದು, ಎರಡು ಹಾಕಿ ತಂಡಗಳು ಈಗಾಗಲೇ ರಿಯೋದಲ್ಲಿ ಬೀಡುಬಿಟ್ಟಿವೆ.
ಬಿಲ್ಲುಗಾರಿಕೆ ತಂಡವು ರಿಯೊದಲ್ಲಿ ಮೊದಲಿಗೆ ಆಗಮಿಸಿದ್ದು, ಉಳಿದವು ಅಥ್ಲೆಟಿಕ್ಸ್ ತಂಡ, ಬಾಕ್ಸರುಗಳು ಮತ್ತು ಶೂಟರ್‌ಗಳು ನಂತರ ಆಗಮಿಸಿದ್ದಾರೆ. ಒಂದೆರಡು ದಿನಗಳ ಮುಂಚೆ ಆಗಮಿಸಿದ್ದ ಇತರೆ ಶೂಟರ್‌ಗಳನ್ನು 2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಸೇರಿಕೊಂಡರು.