ರಿಯೋ ಗ್ರಾಮದಲ್ಲಿ ಕುರ್ಚಿಗಳ ಅಭಾವ: ಭಾರತದ ಹಾಕಿ ಕೋಚ್ ಆಕ್ರೋಶ

ಮಂಗಳವಾರ, 2 ಆಗಸ್ಟ್ 2016 (17:07 IST)
ಭಾರತದ ಹಾಕಿ ತಂಡದ ಕೋಚ್ ರೋಯಿಲೆಂಡ್ ಓಲ್ಟ್‌ಮನ್ಸ್ ರಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಹೆಚ್ಚು ಟೆಲಿವಿಷನ್ ಸೆಟ್‌‍ಗಳು ಮತ್ತು ಪೀಠೋಪಕರಣಗಳನ್ನು ಪೂರೈಸುವಂತೆ ಆಗ್ರಹಿಸಿದ್ದಾರೆ.

ಕ್ರೀಡಾಗ್ರಾಮದಲ್ಲಿ ಕುಳಿತುಕೊಳ್ಳಲು ಸರಿಯಾಗಿ ಕುರ್ಚಿಗಳು ಸಹ ಇಲ್ಲವೆಂದು ಅವರು ಆರೋಪಿಸಿದ್ದು, ಸೂಕ್ತ ಪೀಠೋಪಕರಣಗಳ ಕೊರತೆಯಿಂದ ಆಟಗಾರರಿಗೆ ಗಾಯಗಳಾಗುವ ಅಪಾಯವಿದೆ ಎಂದಿದ್ದಾರೆ. 
 
ಹಾಕಿ ಇಂಡಿಯಾ ಈ ವಿಷಯವನ್ನು ಭಾರತದ ಉಸ್ತುವಾರಿ ಜತೆ ಪ್ರಸ್ತಾಪಿಸಿದೆ. 2012ರ ಲಂಡನ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ನಿರಾಶೆಯ ಪ್ರದರ್ಶನ ನೀಡಿ 12ನೆ ಸ್ಥಾನದಲ್ಲಿ ಮುಕ್ತಾಯ ಕಂಡಿತ್ತು. ಈ ಬಾರಿ ಓಲ್ಟ್‌ಮ್ಯಾನ್ ಕ್ವಾರ್ಟರ್‌ಫೈನಲ್ ಸ್ಥಾನಕ್ಕೆ ಗುರಿಇರಿಸಿದ್ದಾರೆ. ಭಾರತ ಪೂಲ್ ಬಿಯಲ್ಲಿ ಅರ್ಜೆಂಟೈನಾ, ಕೆನಡಾ, ಜರ್ಮನಿ, ಐರ್ಲೆಂಡ್ ಮತ್ತು ನೆದರ್‌ಲೆಂಡ್ಸ್ ಜತೆಗೆ ಆಡಲಿದ್ದು, ಐರ್ಲೆಂಡ್ ವಿರುದ್ಧ ಆಗಸ್ಟ್ 6ರಂದು ಭಾರತ ಪಂದ್ಯವಾಡಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ