ರಿಯೊ ಒಲಿಂಪಿಕ್ಸ್: ಬ್ರಿಟನ್ ತಂಡವನ್ನು ಎದುರಿಸಲಿರುವ ಭಾರತ ಮಹಿಳಾ ಹಾಕಿ

ಸೋಮವಾರ, 8 ಆಗಸ್ಟ್ 2016 (19:47 IST)
ಜಪಾನ್ ವಿರುದ್ಧ ಡ್ರಾ ಮಾಡಿಕೊಂಡಿರುವ ಭಾರತದ ಮಹಿಳಾ ಹಾಕಿ ತಂಡ ಕಳೆದ ಬಾರಿಯ ಕಂಚಿನ ಪದಕ ವಿಜೇತರಾದ ಗ್ರೇಟ್ ಬ್ರಿಟನ್ ತಂಡವನ್ನು ಎರಡನೇ ಪೂಲ್ ಬಿ ವಿಭಾಗದ ಮಹಿಳಾ ಹಾಕಿ ಪಂದ್ಯದಲ್ಲಿ ಮಂಗಳವಾರ ಎದುರಿಸಲಿದೆ.

ಭಾನುವಾರ ನಡೆದ ಪಂದ್ಯದಲ್ಲಿ 2-0ಯಿಂದ ಹಿಂದುಳಿದಿದ್ದ ಭಾರತ ಮಹಿಳಾ ತಂಡ ಉತ್ತರಾರ್ಧದಲ್ಲಿ  ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಮನೋಜ್ಞವಾಗಿ ಗೋಲಾಗಿಸಿ 2-2 ಡ್ರಾ ಮಾಡಿಕೊಂಡಿದ್ದರು.

ರಾಣಿ ರಾಮ್‌ಪಾಲ್ ಮತ್ತು ಲಿಲಿಮಾ ಮಿನ್ಜ್ ಅವರ ಗೋಲುಗಳಿಂದ ಡ್ರಾ ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಯಿತು.  36 ವರ್ಷಗಳ ಬಳಿಕ ಭಾರತ ಮಹಿಳಾ ತಂಡ ಒಲಿಂಪಿಕ್‌ಗೆ ಅರ್ಹತೆ ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ