ಆಸ್ಟ್ರೇಲಿಯಾ ಓಪನ್ 2ನೇ ಸುತ್ತು ಪ್ರವೇಶಿಸಿದ ಸೈನಾ, ಸಿಂಧು ಔಟ್

ಬುಧವಾರ, 8 ಜೂನ್ 2016 (19:09 IST)
ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ  ಮಹಿಳಾ ಸಿಂಗಲ್ಸ್ ಎರಡನೇ ಸುತ್ತನ್ನು ಸರಾಗವಾಗಿ ಪ್ರವೇಶಿಸಿದ್ದಾರೆ. ಪಿ.ವಿ. ಸಿಂಧು ಆರಂಭದ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ ನಿರಾಶೆ ಮೂಡಿಸಿದರು. 
 
 ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಎದುರಾಳಿಗಳನ್ನು ಸೋಲಿಸುವ ಮೂಲಕ ಎರಡನೇ ಸುತ್ತು ಪ್ರವೇಶಿಸಿದರು.  ಆದರೆ ಗುರುಸಾಯಿ ದತ್ ಮೊದಲ ಸುತ್ತಿನಲ್ಲೇ ಸೋತಿದ್ದರಿಂದ ನಿರ್ಗಮಿಸಿದರು. 
 
2014ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದ ಸೈನಾ, ಆಸ್ಟ್ರೇಲಿಯಾದ ಜಾಯ್ ಲಾಯ್ ವಿರುದ್ಧ 21-10, 21-14ರಿಂದ ಮೇಲುಗೈ ಸಾಧಿಸಿದರು. ಏಳನೇ ಸೀಡ್ ಭಾರತೀಯ ಆಟಗಾರ್ತಿ ಮಲೇಷ್ಯಾದ ಜಿನ್ ವೈ ಗೋಹ್ ವಿರುದ್ಧ ಎರಡನೇ ಸುತ್ತನ್ನ ಎದುರಿಸಲಿದ್ದಾರೆ. ವಿಶ್ವ ನಂ.10 ಆಟಗಾರ್ತಿ ಸಿಂಧು ದಕ್ಷಿಣ ಕೊರಿಯಾದ 40ನೇ ಶ್ರೇಯಾಂಕದ ಕಿಮ್ ಹೊಯೊ ಮಿನ್ ಅವರ ವಿರುದ್ಧ ಸೋಲಪ್ಪುವ ಮೂಲಕ ಅಚ್ಚರಿ ಮೂಡಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ