ಸೈನಾ ನೆಹ್ವಾಲ್ ಕೋಚ್ ಗೂ ಪ್ರಕಾಶ್ ಪಡುಕೋಣೆಗೂ ಪಿವಿ ಸಿಂಧು ವಿಚಾರದಲ್ಲಿ ವೈರುಧ್ಯ
ಶನಿವಾರ, 24 ಡಿಸೆಂಬರ್ 2016 (08:20 IST)
ಬೆಂಗಳೂರು: ಸೈನಾ ನೆಹ್ವಾಲ್ ಕೋಚ್ ವಿಮಲ್ ಕುಮಾರ್ ಮತ್ತು ಖ್ಯಾತ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆಗೂ ದೇಶದ ಇನ್ನೊಬ್ಬ ಪ್ರತಿಭಾವಂತ ಆಟಗಾರ್ತಿ ಪಿವಿ ಸಿಂಧು ಬಗ್ಗೆ ಅಭಿಪ್ರಾಯ ಬೇಧ ವ್ಯಕ್ತವಾಗಿದೆ.
ಇದು ಸಹಜವೇ. ಯಾವುದೇ ಗುರುವಾಗಿರಲಿ. ತನ್ನ ಶಿಷ್ಯೆಯನ್ನು ಮೀರಿಸುವುದನ್ನು ಯಾರೂ ಇಷ್ಟಪಡುವುದಿಲ್ಲ. ವಿಮಲ್ ಕುಮಾರ್ ವಿಚಾರದಲ್ಲೂ ಅದೇ ಆಗಿರುವುದು. ಅಸಲಿಗೆ ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ಪಡುಕೋಣೆಗೆ ಯಾರೋ ಪಿ ವಿ ಸಿಂಧು ಬಗ್ಗೆ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಪಡುಕೋಣೆ “ಖಂಡಿತವಾಗಿಯೂ ಸಿಂಧು ನಂ.1 ಸ್ಥಾನಕ್ಕೆ ಬರುತ್ತಾಳೆ. ಇದಕ್ಕೆ ಸರಿಯಾಗಿ ಗೋಪಿ ಚಂದ್ ಆಕೆಯನ್ನು ತಯಾರು ಮಾಡುತ್ತಿದ್ದಾರೆ. ಹೀಗಾಗಿ ನಂ.1 ಸ್ಥಾನಕ್ಕೆ ಬರುವುದು ಆಕೆಯ ಮತ್ತು ಆಕೆಯ ಕೋಚ್ ಗೆ ಬಿಟ್ಟಿದ್ದು” ಎಂದು ಹೇಳಿಕೆ ನೀಡಿದರು.
ಆದರೆ ಸೈನಾ ಕೋಚ್ ವಿಮಲ್ ಕುಮಾರ್ ಗೆ ಯಾಕೋ ಇದು ಇಷ್ಟವಾಗಲಿಲ್ಲ. ಇದೇ ಪ್ರಶ್ನೆಗೆ ಅವರ ಉತ್ತರ ಬೇರೆಯದೇ ಆಗಿತ್ತು. “ಸಿಂಧು ಬಗ್ಗೆ ನಾನೇನೂ ಹೇಳಲಾರೆ. ಮುಂದೊಂದು ದಿನ ಆಕೆ ಸೈನಾ ತಲುಪಿದ ಸ್ಥಾನಕ್ಕೆ ತಲುಪುತ್ತಾರೆಂದು ಈಗಲೇ ಹೇಳಲಾಗದು. ಬಹುಶಃ ಮುಂದಿನ 5-7 ವರ್ಷದವರೆಗೆ ಇಬ್ಬರೂ ಆಟಗಾರ್ತಿಯರು ಬ್ಯಾಡ್ಮಿಂಟನ್ ಲೋಕವನ್ನು ಆಳಬಹುದು” ಎಂದು ತಮ್ಮ ಶಿಷ್ಯೆಯ ಪರವಾಗಿ ಮಾತನಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ