ಸೈನಾ ನೆಹ್ವಾಲ್ ರ ಸ್ಪೂರ್ತಿದಾಯಕ ಸಿನಿಮಾ ರಿಲೀಸ್ ಗೆ ರೆಡಿ
ಮಂಗಳವಾರ, 9 ಮಾರ್ಚ್ 2021 (09:08 IST)
ಮುಂಬೈ: ಭಾರತದ ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ ಸೈನಾ ನೆಹ್ವಾಲ್ ಕುರಿತ ಸಿನಿಮಾವೊಂದು ಬಾಲಿವುಡ್ ನಲ್ಲಿ ತಯಾರಾಗಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಬಿಡುಗಡೆ ದಿನಾಂಕವೂ ಬಹಿರಂಗವಾಗಿದೆ.
ಸೈನಾ ಕುರಿತ ಸಿನಿಮಾದಲ್ಲಿ ಅವರ ಪಾತ್ರವನ್ನು ಪರಿಣಿತಿ ಚೋಪ್ರಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಬಾಲ್ಯದಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವರೆಗಿನ ಏಳುಬೀಳುಗಳ ಕತೆಯಿದೆ. ಈ ಸಿನಿಮಾದ ಟ್ರೈಲರ್ ಮಹಿಳಾ ದಿನಾಚರಣೆಯಂದೇ ಬಿಡುಗಡೆಯಾಗಿದ್ದು, ವೀಕ್ಷಕರಿಗೂ ಇಷ್ಟವಾಗಿದೆ.
ಮಾರ್ಚ್ 26 ರಂದು ಸಿನಿಮಾ ತೆರೆಗೆ ಬರಲಿದೆ. ಸ್ವತಃ ಸೈನಾ ತಮ್ಮ ಕುರಿತಾದ ಸಿನಿಮಾ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಬಲ್ಲ ಸಿನಿಮಾ ಇದಾಗಲಿರುವುದು ಖಂಡಿತಾ.