ಗುವಾಹಟಿ: ಭಾರತದ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮೂರನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಇಂದು (ಶನಿವಾರ) ಮೊದಲ ಪಂದ್ಯ ಆಡಲಿದ್ದಾರೆ.
ಸಿಂಧು ಅವರ ಸಾರಥ್ಯದ ಚೆನ್ನೈ ಸ್ಮ್ಯಾಷರ್ಸ್ ಹಾಗೂ ಸೈನಾ ನೆಹ್ವಾಲ್ ಅವರ ತಂಡ ಅವಧ್ ವಾರಿಯರ್ಸ್ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಸೈನಾ ಹಾಗೂ ಸಿಂಧು ಮುಖಾಮುಖಿಯಾಗುವ ಸಾಧ್ಯತೆ ಇದೆ. ಸಿಂಧು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಸೈನಾ ಎದುರು ಸೋಲು ಕಂಡಿದ್ದರು.
‘ಅವಧ್ ವಾರಿಯರ್ಸ್ ಎದುರು ಗೆಲುವಿನ ಆರಂಭ ಪಡೆಯುವ ವಿಶ್ವಾಸದಲ್ಲಿದ್ದೇವೆ. ಪ್ರತೀ ಪಂದ್ಯದಲ್ಲಿಯೂ ಎಚ್ಚರಿಕೆಯಿಂದ ಆಡಬೇಕಿದೆ’ ಎಂದು ಸಿಂಧು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ