ಒಲಿಂಪಿಕ್ಸ್: ಮೊದಲ ಸುತ್ತಿನಲ್ಲೇ ಸೋಲುಂಡ ಸಾನಿಯಾ ಮಿರ್ಜಾ ಜೋಡಿ

ಭಾನುವಾರ, 25 ಜುಲೈ 2021 (09:30 IST)
ಟೋಕಿಯೋ: ಮಹಿಳಾ ಡಬಲ್ಸ್ ಸ್ಪರ್ಧೆಯಿಂದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಹೊರಬಿದ್ದಿದೆ.


ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್ ನ ಕಿಚ್ನೊಕ್ ಸಹೋದರಿಯರು ಭಾರತದ ಜೋಡಿಯನ್ನು ಮೂರನೇ ಸೆಟ್ ನಲ್ಲಿ ಟೈ ಬ್ರೇಕರ್ ನಲ್ಲಿ 10-8 ಅಂತರದಿಂದ ಸೋಲಿಸಿದೆ.

ಸಾನಿಯಾ ಜೋಡಿಗೆ ಈ ಬಾರಿ ಗೆಲುವು ಕಠಿಣ ಎನ್ನುವುದು ಮೊದಲೇ ಗೊತ್ತಿತ್ತು. ಹಾಗಿದ್ದರೂ ಭಾರತದ ಜೋಡಿ ಎದುರಾಳಿಗೆ ಕಠಿಣ ಸವಾಲಾಗಿದ್ದು ಮೆಚ್ಚಲೇಬೇಕು. ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಲ್ಲಿ ಅಪಾರ ಅನುಭವವಿರುವ ಉಕ್ರೇನ್ ಸಹೋದರಿಯರು ಭಾರತೀಯ ಜೋಡಿಯನ್ನು ಮಣಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ