ಟೀಂ ಇಂಡಿಯಾ ಕೂಡಿಕೊಂಡ ‘ಕೊರೋನಾ ಸೋಂಕಿತರು’

ಭಾನುವಾರ, 25 ಜುಲೈ 2021 (09:20 IST)
ಲಂಡನ್: ಇಂಗ್ಲೆಂಡ್ ಪ್ರವಾಸದ ವೇಳೆ ಕೊರೋನಾ ಚೇತರಿಸಿಕೊಂಡವರು ಹಾಗೂ ಕ್ವಾರಂಟೈನ್ ಗೊಳಗಾದವರೆಲ್ಲರೂ ಈಗ ಮರಳಿ ತಂಡವನ್ನು ಕೂಡಿಕೊಂಡಿದ್ದಾರೆ.


ಥ್ರೋ ಡೌನ್ ಸ್ಪೆಷಲಿಸ್ಟ್ ದಯಾನಂದ್ ಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇವರ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ವೃದ್ಧಿಮಾನ್ ಸಹಾ ಕೂಡಾ ಆಬ್ಸರ್ ವೇಷನ್ ನಲ್ಲಿದ್ದರು.

ಇದೀಗ ಎಲ್ಲರೂ ಮತ್ತೆ ಕೊರೋನಾ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ಬಂದ ಬಳಿಕ ಡುಹ್ರಾಂನಲ್ಲಿರುವ ಟೀಂ ಇಂಡಿಯಾದ ಬಯೋ ಬಬಲ್ ವಾತಾವರಣಕ್ಕೆ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೊರೋನಾದಿಂದ ಚೇತರಿಸಿಕೊಂಡ ರಿಷಬ್ ಪಂತ್ ತಂಡಕ್ಕೆ ಸೇರ್ಪಡೆಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ