ಒಲಿಂಪಿಕ್ಸ್ : ಗೆಲುವಿನ ಶುಭಾರಂಭ ಮಾಡಿದ ಪಿ.ವಿ. ಸಿಂಧು

ಭಾನುವಾರ, 25 ಜುಲೈ 2021 (08:50 IST)
ಟೋಕಿಯೋ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಒಲಿಂಪಿಕ್ಸ್ ನ ಮಹಿಳಾ ಸಿಂಗಲ್ಸ್ ನಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಶುಭಾರಂಭ ಮಾಡಿದ್ದಾರೆ.


ಇಂದು ನಡೆದ ಪಂದ್ಯದಲ್ಲಿ ಇಸ್ರೇಲ್ ನ ಪೊಲಿಕರ್ಪೋವಾ ವಿರುದ್ಧ ಸಿಂಧು 21-7-21-10 ಅಂತರದಿಂದ ಗೆಲುವು ಸಾಧಿಸಿದರು. ಕೇವಲ 29 ನಿಮಿಷಗಳಲ್ಲಿ ಸಿಂಧು ಎದುರಾಳಿಯನ್ನು ಸೋಲಿಸಿ ತಮ್ಮ ಪ್ರಾಬಲ್ಯ ಸಾರಿದರು.

ಸಿಂಧು ಕಳೆದ ಬಾರಿ ಮಹಿಳಾ ಸಿಂಗಲ್ಸ್ ಫೈನಲ್ಸ್ ತಲುಪಿ ಬೆಳ್ಳಿ ಗೆದ್ದಿದ್ದರು. ಈ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಅವರ ಮೇಲೆ ಭಾರತೀಯರಿಗೆ ಅಪಾರ ನಿರೀಕ್ಷೆಯಿದ್ದು, ಆರಂಭದಲ್ಲೇ ಸುಲಭವಾಗಿ ಎದುರಾಳಿಯನ್ನು ಸೋಲಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆ ಹಸಿರಾಗಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ