ಫುಟ್ಬಾಲ್ ಆಟಗಾರ ನೇಮರ್‌ನನ್ನು ಕಂಡು ಪುಳುಕಿತರಾದ ಸೆರೆನಾ ವಿಲಿಯಮ್ಸ್

ಶುಕ್ರವಾರ, 17 ಜೂನ್ 2016 (15:41 IST)
21 ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರೂ ಕೂಡ ಫುಟ್ಬಾಲ್ ಸೂಪರ್‌ಸ್ಟಾರ್‌ನನ್ನು ಕಂಡು ಪುಳುಕಿತಗೊಂಡರು.  ಲಾಸ್ ವೆಗಾಸ್ ಬೀಚ್ ಕ್ಲಬ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ಬ್ರೆಜಿಲ್ ಮತ್ತು ಬಾರ್ಸೆಲೋನಾ ಸ್ಟ್ರೈಕರ್ ನೇಮರ್ ಅವರನ್ನು ಕಂಡು ಅವರ ಅಭಿಮಾನಿಯಂತೆ ಸೆರೆನಾ ವರ್ತಿಸಿದರು.  ಅಮೆರಿಕಕ್ಕೆ ವ್ಯವಹಾರದ ಕಾರಣದಿಂದ ಬಂದಿರುವ ನೇಮರ್ ಕೊಪಾ ಅಮೆರಿಕಾಗೆ ಆಡುತ್ತಿಲ್ಲ.

 
ಕಪ್ಪು ಈಜುಡುಗೆ ಧರಿಸಿದ್ದ ಸೆರೆನಾ ನೇಮರ್  ಜತೆ ತಮ್ಮ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಸರ್ ಸ್ಟಾರ್ ಶರ್ಟ್‌ರಹಿತವಾಗಿ ಚಿತ್ರವನ್ನು ತೆಗೆಸಿಕೊಂಡಿದ್ದಾರೆ. ಈ ಕ್ಷಣವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದ್ದು ಇಬ್ಬರು ಸ್ಟಾರ್ ಆಟಗಾರರು ಅತೀ ಹುರುಪಿನಿಂದ ಚುಂಬಿಸಿದ್ದನ್ನು ಕೂಡ ವಿಡಿಯೊ ಸೆರೆಹಿಡಿದಿದೆ.

ಸೆರೆನಾ ಇತ್ತೀಚೆಗೆ ಸ್ಪೇನ್ ಗಾರ್ಬೈನ್ ಮುಗುರುಜಾಗೆ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯಲ್ಲಿ ಸೋತಿದ್ದರು. ಸ್ಟೆಫಿ ಗ್ರಾಫ್ ಅವರ  22 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ದಾಖಲೆ ಮುರಿಯಲು ಸೆರೆನಾ ಗುರಿಯಿಟ್ಟಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ