ಶಾಕಿಂಗ್ ಘಟನೆಯೊಂದರಲ್ಲಿ 24 ವರ್ಷ ವಯಸ್ಸಿನ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಮೈಕೇಲ್ ಫೇವರ್ ಆನ್ ಫೀಲ್ಡ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಫೇವರ್ ಅವರು ಡೆಫೆನ್ಸರೋಸ್ ಡಿ ಕೊಲನ್ ಎದುರಾಳಿ ಆಟಗಾರ ಜೆರೊನಿಮೊ ಕ್ವಿಂಟಾನಾ ವಿರುದ್ಧ ಚೆಂಡಿಗಾಗಿ ಸೆಣೆಸಾಡುವಾಗ ಕೆಳಕ್ಕೆ ನೆಲದ ಮೇಲೆ ಬಿದ್ದರು. ಫೇವರ್ ಅವರು ಪ್ರಾಂತೀಯ ಕ್ಲಬ್ ಸಾನ್ ಜಾರ್ಗೆ ಡಿ ವಿಲ್ಲಾ ಎಲಿಸಾಗೆ ಆಡುತ್ತಿದ್ದರು.