ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸುವ ಗೌರವಕ್ಕೆ ಶೂಟರ್ ಅಭಿನವ್ ಭಿಂದ್ರಾ ಪಾತ್ರರಾಗಿದ್ದಾರೆ. ಅಭಿನವ್ ಭಿಂದ್ರಾ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಪಥಸಂಚಲನದಲ್ಲಿ ಭಾರತದ ಆಟಗಾರರ ತಂಡವನ್ನು ಮುನ್ನಡೆಸಲು ಭಿಂದ್ರಾ ಆಯ್ಕೆಯಾಗಿದ್ದು, ರಿಯೊ ಒಲಿಂಪಿಕ್ಸ್ ಅವರಿಗೆ ಕೊನೆಯ ಒಲಿಂಪಿಕ್ಸ್ ಆಗುವ ಸಾಧ್ಯತೆಯಿದೆ.