ಒಲಿಂಪಿಕ್ಸ್ ಕೂಟಗಳ ಪೈಕಿ ಭಾರತದ ಅತ್ಯುತ್ತಮ ಸಾಧನೆ
ಅತೀ ಹೆಚ್ಚು ಕ್ರೀಡಾಳುಗಳೊಂದಿಗೆ ಟೋಕಿಯೋಗೆ ಕಾಲಿಟ್ಟ ಭಾರತ ಈ ಬಾರಿ ಇದುವರೆಗೆ ಛಾಪು ಮೂಡಿಸದ ಕ್ರೀಡೆಗಳಲ್ಲೂ ತನ್ನ ಖಾತೆ ತೆರೆದಿದೆ. ಫೆನ್ಸಿಂಗ್, ಗಾಲ್ಫ್ ನಲ್ಲಿ ಭಾರತ ಹಿಂದೆಂದೂ ಮಾಡದ ಸಾಧನೆ ಮಾಡಿದೆ. ಹಲವು ಪ್ರಥಮಗಳಿಗೆ ಕಾರಣವಾಗಿದೆ. ಈ ಬಾರಿ ಒಟ್ಟು 7 ಪದಕ ಗೆದ್ದಿರುವ ಭಾರತ ಇದುವರೆಗಿನ ಅತ್ಯುತ್ತಮ ಸಾಧನೆ ಮಾಡಿದೆ.