ಇಂದೂ ನೀರಜ್ ಚೋಪ್ರಾ ಮ್ಯಾಜಿಕ್ ನಿರೀಕ್ಷೆಯಲ್ಲಿ ಭಾರತ

ಶನಿವಾರ, 7 ಆಗಸ್ಟ್ 2021 (09:13 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತದ ಕೊನೆಯ ಭರವಸೆ ನೀರಜ್ ಚೋಪ್ರಾ ಇಂದು ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.


ನೀರಜ್ ಚೋಪ್ರಾ ಅರ್ಹತಾ ಸುತ್ತಿನಲ್ಲಿ 86.65 ದೂರ ಎಸೆದು ಮೊದಲನೆಯ ಸ್ಥಾನ ಪಡೆದುಕೊಂಡಿದ್ದರು. ಇದರಿಂದಾಗಿ ನೀರಜ್ ಮೇಲೆ ಭಾರೀ ನಿರೀಕ್ಷೆಯಿದೆ.

ಒಂದು ವೇಳೆ ಇಂದು ಕೂಡಾ ನೀರಜ್ ಅಂತಹದ್ದೇ ಒಂದು ಪ್ರದರ್ಶನ ಕಾಯ್ದುಕೊಂಡರೆ ಪದಕ ಗೆಲ್ಲಬಹುದು. ಹೀಗಾಗಿ ಅವರ ಮೇಲೆ ಭರವಸೆ ಹೆಚ್ಚಿದೆ. ನೀರಜ್ ಚೋಪ್ರಾ ಬಿಟ್ಟರೆ ಭಾರತಕ್ಕಿರುವ ಏಕೈಕ ಭರವಸೆ ಕುಸ್ತಿಪಟು ಭಜರಂಗ್ ಪೂನಿಯಾ. ಇವರಿಬ್ಬರನ್ನು ಬಿಟ್ಟು ಉಳಿದೆಲ್ಲಾ ಭರವಸೆ ಆಟಗಾರರ ಸ್ಪರ್ಧೆಗಳು ಈಗಾಗಲೇ ಕೊನೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ