ಮಂಗಳೂರು ಒಬ್ಬಟ್ಟು(ಹೋಳಿಗೆ)

ಬೇಕಾಗುವ ಸಾಮಾಗ್ರಿಗಳು:
ಮೈದಾ - 1 ಕಪ್
ಕೇಸರಿಬಣ್ಣ - ಸ್ವಲ್ಪ
ತುಪ್ಪ - 1 ಚಮಚ
ಉಪ್ಪು - 1 ಚಿಟಿಕೆ
ತೆಂಗಿನ ಎಣ್ಣೆ - ಕಾಲು ಕಪ್
ಅಕ್ಕಿಹಿಟ್ಟು - ಸ್ವಲ್ಪ

ಹೂರಣಕ್ಕೆ:
ಕಡಲೇಬೇಳೆ - 1 ಕಪ್
ಸಕ್ಕರೆ - 1 ಕಪ್
ಏಲಕ್ಕಿಪುಡಿ - ಸ್ವಲ್ಪ

ಪಾಕ ವಿಧಾನ:

ಮೈದಾ ಹಿಟ್ಟಿಗೆ ತುಪ್ಪ, ಕೇಸರಿಬಣ್ಣ, ತುಪ್ಪ ಹಾಗೂ ಉಪ್ಪು ಬೆರೆಸಿ ಸ್ವಲ್ಪವಾಗಿ ನೀರನ್ನು ಸೇರಿಸುತ್ತಾ ಮೃದುವಾದ ಹಿಟ್ಟಿನ ಮುದ್ದೆಯನ್ನು ತಯಾರಿಸಿ ಅರ್ಧ ಗಂಟೆ ಮುಚ್ಚಿಡಿ.

ನಂತರ ಇದನ್ನು ಚೆನ್ನಾಗಿ ನಾದಿ, ಸ್ವಲ್ಪ ಸ್ವಲ್ಪವಾಗಿ ತೆಂಗಿನ ಎಣ್ಣೆಯನ್ನು ಸೇರಿಸಿ. ಹಿಟ್ಟು ಎಣ್ಣೆಯನ್ನು ಸಂಪೂರ್ಣವಾಗಿ ಹೀರುವವರೆಗೆ ಕಲಸುತ್ತಲೇ ಇರಿ.ನಂತರ ಇದನ್ನು 1 ಗಂಟೆ ಮುಚ್ಚಿಡಿ.

ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕಡಲೇಬೇಳೆಯನ್ನು ಮೃದುವಾಗುವವರೆಗೆ ಬೇಯಿಸಿ ನಂತರ ಅಧಿಕವಾದ ನೀರನ್ನು ಬಸಿಯಿರಿ.

ಬಸಿದ ನಂತರ ಪುನಃ ಅದಕ್ಕೆ ಸಕ್ಕರೆಯನ್ನು ಸೇರಿಸಿ ಅದು ಸಂಪೂರ್ಣವಾಗಿ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸಿ.

ಇದು ತಣ್ಣಗಾದ ನಂತರ ಏಲಕ್ಕಿಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಈಗಾಗಲೇ ಕಲಿಸಿಟ್ಟುಕೊಂಡಿರುವ ಮೈದಾ ಹಿಟ್ಟಿನಿಂದ ಸಣ್ಣ ಗಾತ್ರದ ಉಂಡೆಗಳನ್ನೂ, ರುಬ್ಬಿದ ಮಿಶ್ರಣದಿಂದ ಸ್ವಲ್ಪ ದೊಡ್ಡ ಗಾತ್ರದ ಉಂಡೆಗಳನ್ನೂ ತಯಾರಿಸಿ.

ಮೈದಾ ಹಿಟ್ಟಿನ ಉಂಡೆಯನ್ನು ಸಣ್ಣ ವರ್ತುಲವಾಗಿ ಒತ್ತಿ, ಅದರಲ್ಲಿ ಹೂರಣದ ಉಂಡೆಯನ್ನು ಇಟ್ಟು ಮುಚ್ಚಿರಿ.ನಂತರ ಇದರ ಮೇಲೆ ಅಕ್ಕಿ ಹಿಟ್ಟನ್ನು ಉದುರಿಸಿ ತೆಳುವಾದ ಚಪಾತಿಯಂತೆ ಒತ್ತಿಕೊಳ್ಳಿ.

ಇದನ್ನು ಎಣ್ಣೆ ಹಾಕದೇ ಬಿಸಿ ತವೆಯ ಮೇಲೆ ಎರಡೂ ಬದಿ ಬೇಯಿಸಿ.ಇದು ಮಂಗಳೂರಿನವರು ತಯಾರಿಸುವ ಪ್ರಸಿದ್ಧವಾದ ಸಿಹಿತಿಂಡಿಯಾಗಿದೆ.

ವೆಬ್ದುನಿಯಾವನ್ನು ಓದಿ