ಭಾರತಕ್ಕೆ ಸತತ ಮೂರು ಸೋಲು ಇದೇ ಮೊದಲಂತೆ..!

ಬುಧವಾರ, 17 ಜೂನ್ 2009 (16:44 IST)
ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾದ ಭಾರತ - ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ದಾಖಲಾದ ಕೆಲವು ಅಂಕಿ ಅಂಶಗಳಿವು.

- ವೆಸ್ಟ್‌ಇಂಡೀಸ್ ವಿರುದ್ಧ 7 ವಿಕೆಟ್, ಇಂಗ್ಲೆಂಡ್‌ ಎದುರು 3 ರನ್ನುಗಳಿಂದ ಹಾಗೂ ದಕ್ಷಿಣ ಆಫ್ರಿಕಾದೆದುರು 12 ರನ್ನುಗಳಿಂದ ಸೋಲುಣ್ಣುವ ಮೂಲಕ ಭಾರತ ಸತತ ಮೂರು ಸೋಲುಗಳನ್ನು ಮೊತ್ತ ಮೊದಲ ಬಾರಿ ಅನುಭವಿಸಿತು.

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ದಕ್ಷಿಣ ಆಫ್ರಿಕಾವು ಭಾರತದ ವಿರುದ್ಧ ಜಯಗಳಿಸಿದ್ದು ಇದೇ ಮೊದಲು. ಆ ಮೂಲಕ ಮಾರ್ಚ್ 27, 2009ರಿಂದ ಜೂನ್ 16, 2009ರೊಳಗೆ ಸತತ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ಟ್ವೆಂಟಿ-20ಯಲ್ಲಿ ದಾಖಲೆ ನಿರ್ಮಿಸಿದ್ದಾರೆ.

- ದಕ್ಷಿಣ ಆಫ್ರಿಕಾವು ಭಾರತದ ವಿರುದ್ಧ ಗರಿಷ್ಠ ಮೊತ್ತದ ದಾಖಲೆ ನಿರ್ಮಿಸಿದೆ. ಅದೇ ಹೊತ್ತಿಗೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಇದುವರೆಗಿನ ಕನಿಷ್ಠ ಮೊತ್ತವನ್ನು ದಾಖಲಿಸಿತು.

- ತಲಾ 16 ವಿಕೆಟುಗಳನ್ನು ಪಡೆದಿರುವ ಇರ್ಫಾನ್ ಪಠಾಣ್ ಮತ್ತು ಹರಭಜನ್ ಸಿಂಗ್ ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರುಗಳು.

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ಗೌತಮ್ ಗಂಭೀರ್ (476) ನಂತರ 400 ರನ್ ದಾಟಿದ ಎರಡನೇ ಭಾರತೀಯ ಆಟಗಾರ ಯುವರಾಜ್ ಸಿಂಗ್ (415) ಎಂಬ ದಾಖಲೆ ನಿರ್ಮಾಣವಾಗಿದೆ.

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ 500 ರನ್ ಪೂರೈಸಿದ ನಾಲ್ಕನೇ ಆಟಗಾರ ಗ್ರೇಮ್ ಸ್ಮಿತ್. ಇಲ್ಲಿರುವ ಅಗ್ರ ರನ್ ಗಳಿಕೆದಾರರು ಬ್ರೆಂಡನ್ ಮೆಕಲಮ್ (689), ಕೆವಿನ್ ಪೀಟರ್ಸನ್ (529) ಮತ್ತು ಮಿಸ್ಬಾ ಉಲ್ ಹಕ್ (504).

- ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ 500 ರನ್ ಪೂರೈಸಿದ ಮೊದಲ ನಾಯಕ ಗ್ರೇಮ್ ಸ್ಮಿತ್. ಅವರು 17 ಪಂದ್ಯಗಳಿಂದ ಮೂರು ಅರ್ಧಶತಕಗಳ ಸಹಿತ 33.53ರ ಸರಾಸರಿಯಲ್ಲಿ 503 ರನ್ ಮಾಡಿದ್ದಾರೆ.

- ಅಬ್ರಹಾಂ ಡೇ ವಿಲ್ಲರ್ಸ್ 51 ಎಸೆತಗಳಿಂದ 63 ರನ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಟ್ವೆಂಟಿ-20ಯಲ್ಲಿ ತನ್ನ ಮೂರನೇ ಅರ್ಧಶತಕ ದಾಖಲಿಸಿದರು.

- ಈ ಅರ್ಧಶತಕ ದಾಖಲಿಸುವ ಮೂಲಕ ವಿಲ್ಲರ್ಸ್ 300 ರನ್ ಪೂರ್ಣಗೊಳಿಸಿದರು. ಅವರು ಇದುವರೆಗೆ ಆಡಿರುವ 20 ಪಂದ್ಯಗಳಿಂದ 24.06ರ ಸರಾಸರಿಯಲ್ಲಿ 361 ರನ್ ಮಾಡಿದ್ದಾರೆ.

- ವಿಲ್ಲರ್ಸ್ ದಕ್ಷಿಣ ಆಫ್ರಿಕಾಕ್ಕೆ ಎರಡು ಪ್ರಥಮಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮೊದಲನೆಯದ್ದು ಭಾರತದ ವಿರುದ್ಧ ಟ್ವೆಂಟಿ-20ಯಲ್ಲಿ ಮೊದಲ ಅರ್ಧಶತಕ ಹಾಗೂ ಮೂರು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು.

- 16ಕ್ಕೆ ಮೂರು ವಿಕೆಟ್ ಪಡೆಯುವ ಮೂಲಕ ಜೋಹಾನ್ ಬೋಥಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇದು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಶ್ರೇಷ್ಠ ಪ್ರದರ್ಶನವೂ ಹೌದು.

ವೆಬ್ದುನಿಯಾವನ್ನು ಓದಿ