ಇಂಥಾ ಪಿಚ್ ನಲ್ಲಿ ಭಾರತ, ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯವೇ

Krishnaveni K

ಶನಿವಾರ, 8 ಜೂನ್ 2024 (12:24 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಆದರೆ ಪಂದ್ಯ ನಡೆಯಲಿರುವ ನ್ಯೂಯರ್ಕ್ ನ ಪಿಚ್ ಬಗ್ಗೆ ಈಗಾಗಲೇ ಅಪಸ್ವರ ಕೇಳಿಬಂದಿದೆ.

ನ್ಯೂಯಾರ್ಕ್ ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಮೈದಾನದ ಪಿಚ್ ಮಾತ್ರವಲ್ಲ, ಇಡೀ ಮೈದಾನದ ಬಗ್ಗೆಯೇ ಹೆಚ್ಚಿನ ತಂಡಗಳು ಅಸಮಾಧಾನ ಹೊಂದಿವೆ. ಅದರಲ್ಲೂ ಭಾರತ ತಂಡವಂತೂ ಅಸಮಾಧಾನ ಹೊರಹಾಕುತ್ತಲೇ ಇದೆ. ಟಿ20 ವಿಶ್ವಕಪ್ ನಂತಹ ಟೂರ್ನಿ ನಡೆಸುವ ಮೈದಾನವೇ ಇದಲ್ಲ ಎಂದು ಭಾರತ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದರು.

ನಿಧಾನಗತಿಯ ಔಟ್ ಫೀಲ್ಡ್, ಒದ್ದೆ ಮೈದಾನ, ಕೇವಲ ಬೌಲಿಂಗ್ ಸ್ನೇಹಿಯಾಗಿರುವ ಪಿಚ್ ಟಿ20 ಕ್ರಿಕೆಟ್ ಹೇಳಿ ಮಾಡಿಸಿದ್ದೇ ಅಲ್ಲ. ಇದು ಕ್ಲಬ್ ಲೆವೆಲ್ ಪಂದ್ಯವಾಡುವಂತಹ ಮೈದಾನ ಎಂದು ಅಭಿಮಾನಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ನಾಳೆ ಇಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಜಿದ್ದಾಜಿದ್ದಿನ ಪಂದ್ಯವಾಗಿದ್ದು, ಇಂತಹ ಕೇವಲ ಬೌಲಿಂಗ್ ಸ್ನೇಹಿ ಪಿಚ್ ನಲ್ಲಿ ಆಡಿದರೆ ಯಾವುದೇ ರೋಚಕತೆಯಿರಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಜೊತೆಗೆ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ತಂಡ ಅರ್ಧ ಪಂದ್ಯ ಗೆದ್ದಂತೇ. ಇಂತಹ ಪಿಚ್ ನಲ್ಲಿ ಭಾರತ, ಪಾಕಿಸ್ತಾನ ಪಂದ್ಯವೇ ಎಂದು ಅಭಿಮಾನಿಗಳು ಬೇಸರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ