ಬಿಬಿಕೆ 10: ಕಾಲಿಗೆ ಏಟು, ಮನೆಯಿಂದಲೇ ಹೊರಬಂದರಾ ತನಿಷಾ ಕುಪ್ಪಂಡ?

ಬುಧವಾರ, 29 ನವೆಂಬರ್ 2023 (12:30 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರದ ಟಾಸ್ಕ್ ನಲ್ಲಿ ಸ್ಟ್ರಾಂಗ್ ಸ್ಪರ್ಧಿ ತನಿಷಾ ಕುಪ್ಪಂಡ ಗಾಯಗೊಂಡಿದ್ದಾರೆ.

ಎರಡೂ ತಂಡಗಳ ನಡುವೆ ಫಿಸಿಕಲ್ ಟಾಸ್ಕ್ ನಡೆಯುತ್ತಿದ್ದಾಗ ತನಿಷಾ ಕಾಲಿಗೆ ಬಲವಾದ ಏಟು ಬಿದ್ದಿದೆ. ಹೀಗಾಗಿ ಅವರು ಕೆಳಗೆ ಬಿದ್ದು ನೋವಿನಿಂದ ನರಳಾಡಿದ್ದಾರೆ. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

ತನಿಷಾ ಕಾಲಿಗೆ ಬಲವಾದ ಏಟು ಬಿದ್ದಿದೆ ಎನ್ನಲಾಗಿದೆ. ಅವರನ್ನು ಮನೆಯಿಂದ ಹೊರಗೆ ಕರೆದೊಯ್ಯಲಾಗಿದೆ. ಒಂದು ವೇಳೆ ಗಾಯ ಸಣ್ಣಪುಟ್ಟದ್ದಾಗಿದ್ದರೆ ತನಿಷಾ ಮತ್ತೆ ಮನೆಗೆ ಪ್ರವೇಶಿಸಬಹುದು.

ಆದರೆ ಗಾಯ ಗಂಭೀರವಾಗಿದ್ದರೆ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಕಷ್ಟ. ಹೀಗಾಗಿ ಅವರ ಸ್ಥಿತಿಗತಿ ಏನು ಎಂಬ ಕುತೂಹಲ ವೀಕ್ಷಕರಿಗಿದೆ. ತನಿಷಾ ಬಿಗ್ ಬಾಸ್ 10 ರ ಪ್ರಬಲ ಸ್ಪರ್ಧಿ. ಇತ್ತೀಚೆಗೆ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿ, ಬಿಗ್ ಬಾಸ್ ಮನೆಗೆ ಪೊಲೀಸರು ಬಂದು ವಿಚಾರಣೆ ನಡೆಸಿದ್ದರು. ಹಾಗಿದ್ದರೂ ಅವರನ್ನು ಬೆಂಬಲಿಸುವ ವೀಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ