ಬಿಬಿಕೆ9: ಮನೆಯೊಳಗೆ ಅನುಪಮಾ ಮೊಬೈಲ್ ಬಳಸಿದ್ರಾ? ಅಸಲಿ ಸತ್ಯವೇನು?
ಆದರೆ ಬಿಗ್ ಬಾಸ್ ಮನೆಯೊಳಗೆ ಅನುಪಮಾ ಮೊಬೈಲ್ ಬಳಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಿನ್ನೆ ಪ್ರಸಾರವಾದ ಎಪಿಸೋಡ್ ತುಣುಕು.
ಈ ಎಪಿಸೋಡ್ ನಲ್ಲಿ ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ನಡುವೆ ವಾಗ್ವಾದ ನಡೆಯುತ್ತಿರುತ್ತದೆ. ಈ ವೇಳೆ ರೂಪೇಶ್ ರಾಜಣ್ಣ ಹಿಂದೆ ಇದ್ದ ಅನುಪಮಾ ಮೊಬೈಲ್ ನಂತಹ ಸಾಧನ ಬಳಸಿ ಬ್ರೌಸ್ ಮಾಡುತ್ತಿದ್ದಂತೆ ಅನಿಸುತ್ತದೆ. ಇದನ್ನು ನೋಡಿ ನೆಟ್ಟಿಗರು ಫೋಟೋ ಸಮೇತ ಅನುಪಮಾ ಮೊಬೈಲ್ ಬಳಸಿದ್ದಾರೆ ಎಂದು ಎತ್ತಿ ತೋರಿಸಿದ್ದಾರೆ. ಆದರೆ ನಿಜವಾಗಿ ಅನುಪಮಾ ಕ್ಲೀನ್ ಮಾಡುವ ಬ್ರಷ್ ನ್ನು ಹಿಡಿದು ಕಸ ಕಡ್ಡಿ ತೆಗೆಯುತ್ತಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾದ ತುಣುಕಿನಲ್ಲಿ ಅನುಪಮಾ ರೂಪೇಶ್ ರಾಜಣ್ಣಗಿಂತ ಹಿಂದೆ ನಿಂತಿದ್ದು, ಅವರ ಕೈ ಅಸ್ಪಷ್ಟವಾಗಿ ಕಾಣಿಸುತ್ತಿದ್ದರಿಂದ ಥೇಟ್ ಮೊಬೈಲ್ ಹಿಡಿದಂತೆ ತೋರುತ್ತಿತ್ತು. ಇದೇ ತಪ್ಪು ತಿಳುವಳಿಕೆಗೆ ಕಾರಣವಾಗಿದ್ದು.