ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಯಾರು ಗೇಟ್ ಪಾಸ್ ಆಗಬೇಕು?!

ಸೋಮವಾರ, 22 ಜನವರಿ 2018 (17:13 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಇಂದು ನಡೆಯಲಿರುವ ಮಧ್ಯಾವಧಿ ಎಲಿಮಿನೇಷನ್ ನ ತೂಗುಗತ್ತಿ ಯಾವ ಸ್ಪರ್ಧಿ ಮೇಲೆ ಬೀಳಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
 

ಸಮೀರಾಚಾರ್ಯ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಮ್ ಕಾರ್ತಿಕ್ ಮತ್ತು ಶ್ರುತಿ ಪ್ರಕಾಶ್ ಪೈಕಿ ಫೈನಲ್ ಗೆ ಉಳಿಯುವ ಸ್ಪರ್ದಿಗಳು ಯಾರೆಲ್ಲಾ ಎಂದು ಇಂದು ರಾತ್ರಿ ಬಿಗ್ ಬಾಸ್ ನಿರ್ಧರಿಸಲಿದೆ.

ಈ ವಾರ ಅನುಪಮಾ ಗೌಡ ಹೊರಬಿದ್ದಿದ್ದರು. ಆಗಲೇ ಕಿಚ್ಚ ಸುದೀಪ್ ಇನ್ನೊಬ್ಬ ಅನುಪಮಾಗಿಂತ ಕೊಂಚ ಹೆಚ್ಚು ವೋಟ್ ಪಡೆದ ಸ್ಪರ್ಧಿ ಹೊರಹೋಗಲಿದ್ದಾರೆ ಎಂದಿದ್ದರು. ಅದರಂತೆ ಇಂದು ಆ ಸ್ಪರ್ಧಿ ಯಾರೆಂದು ಬಿಗ್ ಬಾಸ್ ತಿಳಿಸಲಿದ್ದಾರೆ.

ಪ್ರೇಕ್ಷಕರು ಆಗಲೇ ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಪ್ರಕಾಶ್ ಹೊರ ಹೋಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಶ್ರುತಿ ಪ್ರಕಾಶ್ ಹೊರ ಹೋಗಬಾದರೆ ಬಿಗ್ ಬಾಸ್ ಶಾ ನೋಡಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ನಿಜವಾಗಿ ಹೊರ ಹೋಗುವವರು ಯಾರೆಂದು ಬಿಗ್ ಬಾಸ್ ಘೋಷಿಸಿದ ಮೇಲಷ್ಟೇ ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ