ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿರುವ ‘ರಾಮಾಯಣ’ ಧಾರವಾಹಿ ವಿಶ್ವ ದಾಖಲೆ ಮಾಡಿದೆ. ಮರುಪ್ರಸಾರವಾಗಿದ್ದರೂ ಸಹ ಈ ಹಳೆಯ ಧಾರವಾಹಿ ವೀಕ್ಷಣ ವಿಚಾರದಲ್ಲಿ ದಾಖಲೆ ಮಾಡಿದೆ.
ಲಾಕ್ ಡೌನ್ ಸಮಯದಲ್ಲಿ ಪರಿವಾರ ಸಮೇತ ಎಲ್ಲರೂ ವೀಕ್ಷಣೆ ಮಾಡಿದ ಜನಪ್ರಿಯ ಶೋ ಧಾರವಾಹಿ. ಬೇರೆ ಖಾಸಗಿ ವಾಹಿನಿಗಳು ಹೊಸ ಎಪಿಸೋಡ್ ಗಳಿಲ್ಲದೇ ಹಳೆಯ ಶೋಗಳನ್ನೇ ಮರುಪ್ರಸಾರ ಮಾಡುತ್ತಿರುವಾಗ ಡಿಡಿ ವಾಹಿನಿ ರಾಮಾಯಣ, ಮಹಾಭಾರತ ಧಾರವಾಹಿ ಮೂಲಕ ಮ್ಯಾಜಿಕ್ ಮಾಡಿದೆ.
ಏಪ್ರಿಲ್ 16 ರಂದು ಈ ಶೋವನ್ನು ವಿಶ್ವದಾದ್ಯಂತ ಒಟ್ಟು 77 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಈ ಮೂಲಕ ವಿಶ್ವದಲ್ಲೇ ಅತ್ಯಧಿಕ ವೀಕ್ಷಣೆ ಕಂಡ ಶೋ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ.