ಇನ್ನು ಧಾರವಾಹಿ ಹೊಸ ಎಪಿಸೋಡ್ ಗಳೂ ಇರಲ್ಲ!

ಮಂಗಳವಾರ, 27 ಏಪ್ರಿಲ್ 2021 (10:17 IST)
ಬೆಂಗಳೂರು: ಲಾಕ್ ಡೌನ್ ಆಗಿ ಮನೆಯಲ್ಲಿರುವಾಗ ಕನಿಷ್ಠ ಮನರಂಜನೆಗೆಂದು ಧಾರವಾಹಿ, ರಿಯಾಲಿಟಿ ಶೋ ನೋಡಿಕೊಂಡಿರಬಹುದು ಎಂದುಕೊಂಡರೆ ಅದಕ್ಕೂ ಬ್ರೇಕ್ ಬೀಳಲಿದೆ.


ರಾಜ್ಯ ಸರ್ಕಾರ ಮುಂದಿನ 14 ದಿನಗಳವರೆಗೆ ಲಾಕ್ ಡೌನ್ ಘೋಷಿಸಿದೆ. ಅದರಂತೆ ಸಿನಿಮಾ, ಕಿರುತೆರೆ ಶೂಟಿಂಗ್ ಗೂ ಬ್ರೇಕ್ ಬಿದ್ದಿದೆ. ಇದುವರೆಗೆ ಕಿರುತೆರೆ ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಈಗ ಅದಕ್ಕೂ ಬ್ರೇಕ್ ಬಿದ್ದಿದೆ.

ಮೊದಲೇ ಎಪಿಸೋಡ್ ಬ್ಯಾಂಕ್ ಮಾಡಿರದ ಧಾರವಾಹಿಗಳ ಹೊಸ ಎಪಿಸೋಡ್ ಗಳು ಇನ್ನು ಸದ್ಯಕ್ಕೆ ಪ್ರಸಾರವಾಗದು. ಲಾಕ್ ಡೌನ್ ಮುಗಿದು ಸರ್ಕಾರ ಶೂಟಿಂಗ್ ಗೆ ಅನುಮತಿ ನೀಡಿದರಷ್ಟೇ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ