ಪ್ರಭಾಸ್ ಸಾಹೋ ಸಿನಿಮಾ ಕನ್ನಡ ಕಿರುತೆರೆಯಲ್ಲಿ: ಟ್ರೋಲ್ ಆದ ವಾಹಿನಿ

ಗುರುವಾರ, 15 ಅಕ್ಟೋಬರ್ 2020 (10:42 IST)
ಬೆಂಗಳೂರು: ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾದ ಕನ್ನಡ ಡಬ್ಬಿಂಗ್ ಅವತರಣಿಕೆಯನ್ನು ಕನ್ನಡ ಕಿರುತೆರೆಯಲ್ಲಿ ಪ್ರಸಾರ ಮಾಡಲು ಹೊರಟಿರುವ ಜೀ ಕನ್ನಡ ವಾಹಿನಿ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ.


ಈಗಾಗಲೇ ಉದಯ, ಸುವರ್ಣ ವಾಹಿನಿಗಳು ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತಿವೆ. ಇದೀಗ ಜೀ ಕನ್ನಡ ಕೂಡಾ ತೆಲುಗಿನ ಸಾಹೋ ಸಿನಿಮಾವನ್ನು ಪ್ರಸಾರ ಮಾಡಲಿರುವುದಾಗಿ ಪ್ರಕಟಣೆ ನೀಡಿರುವುದು ಟೀಕೆಗೆ ಗುರಿಯಾಗಿದೆ. ಪ್ರಸಾರ ಮಾಡಲೇಬೇಕಾದರೆ ತೆಲುಗಿನಲ್ಲೇ ಮಾಡಿ. ಅಥವಾ ಬಾಹುಬಲಿ 2 ಸಿನಿಮಾವನ್ನೂ ಕನ್ನಡದಲ್ಲಿ ಪ್ರಸಾರ ಮಾಡಿ. ಇಲ್ಲವೇ ಸಾಕಷ್ಟು ಕನ್ನಡ ಸಿನಿಮಾಗಳಿವೆ. ಅವುಗಳನ್ನು ಪ್ರಸಾರ ಮಾಡಿ. ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಿಗರ ಮೇಲೆ ಹೇರಬೇಡಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ