ಬರ್ತ್ ಡೇಗೆ ಶುಭ ಕೋರಿದ ದೀಪಿಕಾಗೆ ‘ರಾಣಿ ಜಾ..’ ಎಂದ ಶೈನ್ ಶೆಟ್ಟಿ!

ಶನಿವಾರ, 4 ಏಪ್ರಿಲ್ 2020 (10:04 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಫೇವರಿಟ್ ಜೋಡಿ ಎನಿಸಿಕೊಂಡಿದ್ದ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಹೊರಗೆ ಬಂದ ಮೇಲೂ ಅದೇ ಸ್ನೇಹ ಮುಂದುವರಿಸಿದ್ದಾರೆ.


ಇಂದು ಶೈನ್ ಶೆಟ್ಟಿ ಬರ್ತ್ ಡೇ ಇದ್ದು, ನಿನ್ನೆಯೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ವಿಶೇಷವಾಗಿ ಶುಭ ಕೋರಿದ ದೀಪಿಕಾಗೆ ಶೈನ್ ಪ್ರತಿಕ್ರಿಯಿಸಿದ್ದು, ಥ್ಯಾಂಕ್ಯೂ ರಾಣಿ ಜಾ.. ಎಂದು ಪ್ರೀತಿಯಿಂದ ಕರೆದಿದ್ದಾರೆ.

ಶೈನ್ ಈ ರೀತಿ ಕರೆದಿರುವುದಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಹೀಗೆಂದರೆ ಅರ್ಥವೇನು ಎಂದು ಕೇಳಿದ್ದಾರೆ. ಮತ್ತೆ ಕೆಲವರು ನಿಮ್ಮ ರಾಣಿಯನ್ನು ಮದುವೆಯಾಗಿ. ನಿಮ್ಮದು ಒಳ್ಳೆ ಜೋಡಿ ಎಂದಿದ್ದಾರೆ. ಆದರೆ ಇದಕ್ಕೆ ಇಬ್ಬರೂ ಯಾವುದೇ ಕಾಮೆಂಟ್ ಮಾಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ