ಸೃಜನ್ ಜತೆ ಸಂಬಂಧ ಕಲ್ಪಿಸಿದ್ದಕ್ಕೆ ಅಭಿಮಾನಿ ಮೇಲೆ ಸಿಟ್ಟಾದ ನಟಿ ಶ್ವೇತಾ ಚೆಂಗಪ್ಪ
ಈ ಫೋಟೋಗಳನ್ನು ನೋಡಿದ ವ್ಯಕ್ತಿಯೊಬ್ಬ ಶ‍್ವೇತಾಗೆ ‘ಕಂಗ್ರಾಜ್ಯುಲೇಷನ್ಸ್. ಕೊನೆಗೂ ಸೃಜನ್ ಮಗುವಿಗೆ ತಾಯಿಯಾಗುತ್ತಿದ್ದೀರಿ’ ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದಿರುವ ಶ್ವೇತಾ ಆತನ ಜನ್ಮ ಜಾಲಾಡಿದ್ದಾರೆ. ‘ನನ್ನ ವೈಯಕ್ತಿಕ ವಿಚಾರಗಳಿಗೆ ಸೃಜನ್ ಲೋಕೇಶ್ ಜತೆಗೆ ಯಾಕೆ ಸಂಬಂಧ ಕಲ್ಪಿಸಿಕೊಳ್ಳುತ್ತೀರಿ? ಅಷ್ಟಕ್ಕೂ ನಾನಿಲ್ಲಿ ಮಜಾ ಟಾಕೀಸ್ ನ ರಾಣಿ ಪಾತ್ರ ಮಾಡ್ತಾ ಇಲ್ಲ. ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವಿನ ವ್ಯತ್ಯಾಸ ತಿಳಿದು, ನಿಮ್ಮ ಕಾಮೆಂಟ್ ಮಾಡಿ’ ಎಂದು ಶ್ವೇತಾ ಸಿಟ್ಟಿನಿಂದಲೇ ತಿರುಗೇಟು ನೀಡಿದ್ದಾರೆ.