ತಿರುಮಲ ಬ್ರಹ್ಮೋತ್ಸವ ವೈಭವಕ್ಕೆ ತೆರೆ

ಭಾನುವಾರ, 23 ಸೆಪ್ಟಂಬರ್ 2007 (11:04 IST)
ಒಂಬತ್ತು ದಿನಗಳ ತಿರುಮಲಾಧೀಶ ಶ್ರೀನಿವಾಸನ ವೈಭವೋಪೇತ ಬ್ರಹ್ಮೋತ್ಸವ ಕಾರ್ಯಕ್ರಮಗಳು ಭಾನುವಾರಮುಕ್ತಾಯ ಹಂತದಲ್ಲಿವೆ.

ಕೊನೆಯ ದಿನವಾದ ಭಾನುವಾರ, ಉಷಃಕಾಲದಲ್ಲಿ ಶ್ರೀದೇವರಿಗೆ ತೈಲ, ಸುಗಂಧ ದ್ರವ್ಯಗಳನ್ನು ಲೇಪಿಸಿ, ಅಭೀಷೇಕ ನಡೆದ ಬಳಿಕ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಸ್ವಾಮಿ ಪುಷ್ಕರಿಣಿಯಲ್ಲಿ ಸುದರ್ಶನ ಚಕ್ರಕ್ಕೆ ಸ್ನಾನ ಮಾಡಿಸಲಾಯಿತು.

ಸಂಜೆ ಬಂಗಾರು ತಿರುಚ್ಚಿ ಉತ್ಸವ ನಡೆದು ಧ್ವಜಾವರೋಹಣದೊಂದಿಗೆ ವೈಭವದ ಉತ್ಸವ ವಿಧಿಗಳು ಕೊನೆಗೊಳ್ಳಲಿವೆ.

ಈ ಸಂದರ್ಭ ದೇಶಾದ್ಯಂತದಿಂದ ಬಂದ ತಿರುಪತಿ ಶ್ರೀವೆಂಕಟರಮಣನ ಭಕ್ತರು ಶ್ರೀಶ್ರೀನಿವಾಸನ ವೈಭವವನ್ನು ಕಂಡು ಪುನೀತ ಭಾವ ಹೊಂದಿದರು.

ವೆಬ್ದುನಿಯಾವನ್ನು ಓದಿ