ಸೆ.17 ಬೆಳಿಗ್ಗೆ ಸಿಂಹ ವಾಹನ ಉತ್ಸವ

ಬ್ರಹ್ಮೋತ್ಸವದ ಮೂರನೇ ದಿನ, ಸೆ.17ರಂದು ಬೆಳಿಗ್ಗೆ ದೇವರ ವಿಗ್ರಹಗಳನ್ನು ಸಿಂಹವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ಒಯ್ಯಲಾಗುತ್ತದೆ.

ಸಿಂಹವು ರಾಜಗಾಂಭೀರ್ಯ ಮತ್ತು ಶಕ್ತಿಯ ಸಂಕೇತ. ಭಗವದ್ಗೀತೆಯ ಪ್ರಕಾರ, ದೇವನು ಪ್ರಾಣಿಗಳಿಗೆ ಸಿಂಹವಿದ್ದಂತೆ. ದೇವನನ್ನು ಹರಿ ಎಂದೂ ಕರೆಯಲಾಗುತ್ತದೆ. ಹರಿ ಎಂದರೆ ಒಂದು ಅರ್ಥ ಸಿಂಹ. ಹರಿಯು ಸಿಂಹದ ಮೇಲೆ ಕುಳಿತುಕೊಳ್ಳುತ್ತಾನೆ. ಅಂದರೆ ದೇವರು ದೇವರ ಮೇಲೆಯೇ ಆಸೀನನಾಗುತ್ತಾನೆ ಎಂದುಕೊಳ್ಳಬಹುದು.

ಅಂತೆಯೇ ಹಿರಣ್ಯಕಶಿಪು ಎಂಬ ದಾನವನನ್ನು ಕೊಲ್ಲಲು ಶ್ರೀಹರಿಯು ನರಸಿಂಹಾವತಾರ (ಅರ್ಧ ನರ, ಅರ್ಧ ಸಿಂಹ ರೂಪ) ತಾಳಿದ ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಈ ಎಲ್ಲ ದೃಷ್ಟಿಕೋನಗಳೊಂದಿಗೆ ಶ್ರೀವೆಂಕಟೇಶ್ವರ ಸ್ಮಾಮಿಯು ಬ್ರಹ್ಮೋತ್ಸವದ ಮೂರನೇ ದಿನ ಸಿಂಹ ವಾಹನದಲ್ಲಿ ಆಸೀನನಾಗುತ್ತದೆ.

ಈ ಸೇವೆಯು ಬೆಳಿಗ್ಗೆ 9.00 ಗಂಟೆಯಿಂದ 11ಗಂಟೆಯವರೆಗೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ