ತಿರುಪತಿ ಬ್ರಹ್ಮೋತ್ಸವ ವಿಧಿಗಳಿಗೆ ಚಾಲನೆ

ತಿರುಮಲ ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿ ಬ್ರಹ್ಮೋತ್ಸವ ವಿಧಿ ವಿಧಾನಗಳಿಗೆ ಶುಕ್ರವಾರ ಚಾಲನೆ ದೊರೆತಿದೆ. ದೇಶ ವಿದೇಶಗಳಿಂದ ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಆಗಮಿಸಿದ್ದು, ವೆಂಕಟೇಶ್ವರನ ದರ್ಶನಕ್ಕೆ ಕಿಕ್ಕಿರಿದು ತುಂಬಿದ್ದಾರೆ.

ಸಂಜೆ ಅಂಕುರಾರ್ಪಣೆ ವಿಧಿ ವಿಧಾನಗಳು ನಡೆದಿದ್ದು, ನಾಳೆ ಧ್ವಜಾರೋಹಣದೊಂದಿಗೆ ಉತ್ಸವಾದಿಗಳು ಆರಂಭವಾಗಲಿವೆ. ನಾಳೆ ನಡೆಯುವ ಪೆದ್ದ ಶೇಷ ವಾಹನ ಉತ್ಸವ ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಕುತೂಹಲಿಗಳಾಗಿದ್ದಾರೆ.

ಇದೇ ವೇಳೆ ದೇವಳದ ನಗರಿ, ತಿರುಮಲ ಬೆಟ್ಟವು ವಿದ್ಯುದ್ದೀಪಗಳಿಂದ ಸಾಲಂಕೃತವಾಗಿದ್ದು, ಕಣ್ಮನ ಸೆಳೆಯುತ್ತಿದ್. ಏಳು ಬೆಟ್ಟದೊಡೆಯನ ದರ್ಶನ ಪಡೆಯಲು ಮತ್ತು ಬ್ರಹ್ಮೋತ್ಸವ ವೈಭವ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.

ಬ್ರಹ್ಮೋತ್ಸವ ಪ್ರಯುಕ್ತ ವೆಬ್‌ದುನಿಯಾ ಕನ್ನಡ ತಾಣವು ವಿಶೇಷ ಪುಟವೊಂದನ್ನು ಸಿದ್ಧಪಡಿಸಿದ್ದು, ವಿವಿಧ ಉತ್ಸವಾದಿಗಳ ವೀಡಿಯೋಗಳನ್ನು ಕೂಡ ಪ್ರಸಾರ ಮಾಡಲಾಗುತ್ತದೆ. ವೀಡಿಯೋ ಮೂಲಕ ವೆಂಕಟೇಶ್ವರನ ವೈಭವವನ್ನು ವೆಬ್ ದುನಿಯಾ ಓದುಗರು ಇಲ್ಲಿ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ