ಸೆ.15 ಸಂಜೆ: ಧ್ವಜಾರೋಹಣ, ಪೆದ್ದಶೇಷ ವಾಹನೋತ್ಸವ

ಸೆ.15ರಂದು ಸಂಜೆ ಗರುಡಧ್ವಜವನ್ನುತಿರುಮಲೆ ಬೆಟ್ಟದ ಶ್ರೀವಾರಿ ಆಲಯದ ಕೊಡಿ ಮರದ (ಧ್ವಜಸ್ಥಂಭ) ಮೇಲೆ ಏರಿಸುವ ಮೂಲಕ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ.

ಪೆದ್ದ (ದೊಡ್ಡ ಎಂದರ್ಥ) ಶೇಷ ವಾಹನದಲ್ಲಿ ಶ್ರೀ ವೆಂಕಟೇಶ್ವರನ ವೈಭವೋಪೇತ ಮೆರವಣಿಗೆಯು ಮಂದಿರದ ಸುತ್ತಲಿನ ನಾಲ್ಕೂ ಬೀದಿಗಳಲ್ಲಿ ಜರುಗುತ್ತದೆ. ಸಾಮಾನ್ಯವಾಗಿ ಈ ಮೆರವಣಿಗೆಯು ರಾತ್ರಿ 10ರಿಂದ ಆರಂಭವಾಗಿ ಮಧ್ಯರಾತ್ರಿ ವರೆಗೂ ಸಾಗುತ್ತದೆ.

ಶೇಷ ಎಂಬುದರ ಅರ್ಥ ಸೇವೆ ಎಂಬುದು. ವೈಕುಂಠಲೋಕದಲ್ಲಿ ಸಾವಿರ ಹೆಡೆಗಳ ಸರ್ಪರಾಜ ಆದಿಶೇಷನ ಮೇಲೆ ಶೇಷಶಯನನಾಗಿ ಶ್ರೀ ಮಹಾವಿಷ್ಣುವು ಪವಡಿಸಿರುತ್ತಾನೆ.

ಶ್ರೀವೆಂಕಟೇಶ್ವರನ ಸಾನ್ನಿಧ್ಯವಿರುವ ತಿರುಮಲ ಬೆಟ್ಟಗಳನ್ನು ಆದಿಶೇಷನ ಅವತಾರ ಎಂದೇ ಪರಿಭಾವಿಸಲಾಗುತ್ತದೆ. ಇದರ ಜ್ಞಾಪಕಾರ್ಥವಾಗಿ ವೆಂಕಟೇಶ್ವರನನ್ನು ಶೇಷ ವಾಹನದಲ್ಲಿ (ಆದಿಶೇಷನ ರೂಪದಲ್ಲಿರುವ ವಾಹನ) ತಿರುಮಲದ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಬ್ರಹ್ಮೋತ್ಸವದ ಮೊದಲ ಎರಡು ದಿನವೂ ಶೇಷವಾಹನ ಉತ್ಸವ. ಒಂದು ಪೆದ್ದ ಶೇಷ ವಾಹನ ಮತ್ತು ಇನ್ನೊಂದು ಚಿನ್ನ ಶೇಷ ವಾಹನ.

ಕಾರ್ಯಕ್ರಮಗಳು ಇಂತಿವೆ:

ಧ್ವಜಾರೋಹಣ...... ಸಾಯಂಕಾಲ 4.14 ಗಂಟೆಯಿಂದ 4.39 ರವರೆಗೆ
ದೊಡ್ಡಶೇಷವಾಹನ... ರಾತ್ರಿ 9.00ಗಂಟೆಯಿಂದ 11 ಗಂಟೆಯವರೆಗೆ
ಸರ್ವದರ್ಶನ..........ಬೆಳಿಗ್ಗೆ 10.30 ಗಂಟೆಯಿಂದ ಸಾಯಂಕಾಲ 4.00 ಗಂಟೆಯವರೆಗೆ
ಸರ್ವದರ್ಶನ..........ರಾತ್ರಿ 8.00ಗಂಟೆಯಿಂದ ಮಧ್ಯರಾತ್ರಿ12.30 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ