ಸೆ.20 ಬೆಳಿಗ್ಗೆ ಹನುಮಂತ ವಾಹನ ಉತ್ಸವ

ತಿರುಪತಿ ಬ್ರಹ್ಮೋತ್ಸವದ ಆರನೇ ದಿನ (ಸೆ.20) ಬೆಳಿಗ್ಗೆ, ವಿಗ್ರಹಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾದ ಹನುಮದ್ ವಾಹನದಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಭಗವಾನ್ ವಿಷ್ಣುವಿನ ಅವತಾರಗಳಲ್ಲೊಂದಾಗಿರುವ ಶ್ರೀರಾಮನ ಪರಮ ಭಕ್ತನೇ ಹನುಮಂತ. ಹನುಮನು ಶ್ರೀರಾಮನಿಗೆ ಎಷ್ಟರಮಟ್ಟಿಗೆ ಸೇವೆ ಮಾಡಿದ್ದನೆಂದರೆ, ದೇವರಿಗೆ ಕೂಡ ಆಂಜನೇಯನಿಗೆ ಧನ್ಯವಾದ ಸಲ್ಲಿಸಲಾಗಿರಲಿಲ್ಲ. ಹನುಮದ್ ವಾಹನದಲ್ಲಿ ಶ್ರೀವಾರಿಯನ್ನು ನೋಡಿದಲ್ಲಿ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ.

ಈ ಉತ್ಸವ ಬೆಳಿಗ್ಗೆ 9.00 ಗಂಟೆಯಿಂದ 11.00 ಗಂಟೆಯವರೆಗೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ