2 ಡೋಸ್ ಲಸಿಕೆ ಗರಿಷ್ಠ ರಕ್ಷಣೆ ನೀಡುತ್ತದೆ; ಅಧ್ಯಯನ

ಶುಕ್ರವಾರ, 8 ಅಕ್ಟೋಬರ್ 2021 (09:48 IST)
ಬ್ರಿಟನ್, ಅ 08 : ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಎರಡು ಡೋಸ್ಗಳ ಲಸಿಕೆ ಪಡೆದುಕೊಂಡಿದ್ದರೆ ಅದು ವ್ಯಕ್ತಿಗೆ ಸೋಂಕಿನ ವಿರುದ್ಧ 94% ರಕ್ಷಣೆ ನೀಡಬಲ್ಲದು ಎಂದು ಬ್ರಿಟನ್ನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.
Photo Courtesy: Google

ZOE ಕೋವಿಡ್ ಅಧ್ಯಯನ ಎಂದು ಇದನ್ನು ಕರೆಯಲಾಗಿದೆ. ಕಳೆದ ವರ್ಷದಿಂದಲೂ ಬ್ರಿಟನ್ನಲ್ಲಿ ಕೊರೊನಾ ಸೋಂಕಿನ ಹರಡುವಿಕೆಯ ವಾಸ್ತವ ಹಾಗೂ ನೈಜ ಮಾಹಿತಿಯನ್ನು ಕಲೆ ಹಾಕುತ್ತಿರುವ ಆಪ್ ಆಧಾರಿತ ಅಧ್ಯಯನ ಇದಾಗಿದ್ದು, ಸೋಂಕನ್ನು ತಡೆಯುವಲ್ಲಿ ಎರಡು ಡೋಸ್ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಅಧ್ಯಯನ ನಡೆಸಲಾಗಿದೆ.
ಆಕ್ಸ್ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್ ಪಡೆದುಕೊಂಡವರಲ್ಲಿ ಲಸಿಕೆ ಪಡೆದ ನಂತರದ ಆರು ತಿಂಗಳವರೆಗೂ ಸೋಂಕಿನ ವಿರುದ್ಧ 71% ರಕ್ಷಣೆಯನ್ನು ನೀಡಬಲ್ಲದು ಎಂಬುದನ್ನು ಅಧ್ಯಯನ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ