26 ಔಷಧಿಗಳು, ಅಗತ್ಯ ಔಷಧಿಗಳ ಪಟ್ಟಿಯಿಂದ ಹೊರಕ್ಕೆ!

ಬುಧವಾರ, 14 ಸೆಪ್ಟಂಬರ್ 2022 (10:26 IST)
ನವದೆಹಲಿ : ಸದ್ಯ ಮಾರುಕಟ್ಟೆಯಲ್ಲಿರುವ 26 ಔಷಧಿಗಳನ್ನು ಕೇಂದ್ರ ಸರ್ಕಾರ ಅಗತ್ಯ ಔಷಧಿಗಳ ಪಟ್ಟಿಯಿಂದ ಹೊರಕ್ಕೆ ಇಟ್ಟಿದೆ.

ತುರ್ತು ಬಳಕೆಯ ಔಷಧಿಗಳ ಪಟ್ಟಿಯಿಂದ ಆಸಿಡಿಟಿ ನಿವಾರಣೆಗೆ ಬಳಸುವ ರಾನ್ಟ್ಯಾಕ್, ಜಿನ್ಟ್ಯಾಕ್ ಮಾತ್ರೆಗಳನ್ನು ತೊಲಗಿಸಿದೆ.

 
ಈ ಎರಡು ಮಾತ್ರೆಗಳ ಜೊತೆಗೆ ಒಟ್ಟು 26 ಮಾತ್ರೆಗಳನ್ನು ಹೊರಗಿಟ್ಟು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ಎಜಿತ್ರೋಮೈಸಿನ್, ಪೆಂಟಾಮಿಡಿನ್ ಮಾತ್ರೆಗಳು ಕೂಡ ಸೇರಿವೆ. 384 ಅಗತ್ಯ ಔಷಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ