ನವದೆಹಲಿ : ಭಾರತೀಯ ಯುವಕರಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅಗ್ನಿಪಥ್ ಎಂಬ ಹೊಸ ಅಲ್ಪಾವಧಿಯ ನೇಮಕಾತಿ ಯೋಜನೆಯನ್ನು ಕೇಂದ್ರ ಪ್ರಾರಂಭಿಸಿದೆ.
ಅಗ್ನಿಪಥ್ ಎಂದು ಕರೆಯಲ್ಪಡುವ ಯೋಜನೆ 17.5 ರಿಂದ 21 ವರ್ಷ ವಯಸ್ಸಿನ ಯುವಕರು 4 ವರ್ಷಗಳ ಅವಧಿಗೆ 3 ಸೇವೆಗಳಲ್ಲಿ ಯಾವುದಾದರೂ ಒಂದರಲ್ಲಿ ಸೇರಿಕೊಳ್ಳಬಹುದು.
ಈ ಯುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಈ ಹೊಸ ನೇಮಕಾತಿಯನ್ನು ಕೇಂದ್ರ ಮಂಗಳವಾರ ಅನಾವರಣ ಮಾಡಿದೆ.
ಅಗ್ನಿಪಥ್ ಯೋಜನೆಯನ್ನು ಈ ಹಿಂದೆ ಟೂರ್ ಆಫ್ ಡ್ಯೂಟಿ ಎಂದು ಕರೆಯಲಾಗುತ್ತಿತ್ತು. ಇದನ್ನು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಾರಂಭಿಸಿದ್ದರು. ಕಳೆದ 2 ವರ್ಷಗಳ ವ್ಯಾಪಕ ಚರ್ಚೆಗಳ ಬಳಿಕ ಇದೀಗ ಭದ್ರತಾ ಸಮಿತಿ ಅನುಮತಿ ನೀಡಿದ ಬಳಿಕ ನೇಮಕಾತಿಯನ್ನು ಘೋಷಿಸಲಾಗಿದೆ.