ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಒಂದು ವರ್ಷ ?
ಇಂದು ಭೂಪೇಂದರ್ ಯಾದವ್ ಅವರಿಗೆ ಮನವಿ ಸಲ್ಲಿಸಿದ ವರ್ತಕರ ಸಂಘ ಜುಲೈ 1 ರಿಂದ ಜಾರಿಗೆ ಬಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಅನುಸರಿಸಲು ಒಂದು ವರ್ಷದ ಅವಧಿಯನ್ನು ಕೇಳಿದೆ. ಉದ್ಯಮದಾರರನ್ನು ಮತ್ತು ಉದ್ಯೋಗಿಗಳಿಗೆ ಪೂರಕವಾಗಿ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವರ್ತಕರ ಸಂಘದ ಪ್ರಕಾರ ಈಗಾಗಲೇ ಕೆಲ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉದ್ಯಮವಾಗಿಸಿಕೊಂಡು ಹಲವಾರು ಕಂಪನಿಗಳು ಇವೆ. ಹಲವು ಕಂಪನಿಗಳು ಈಗಾಗಲೇ ಸ್ಟಾಕ್ ಇಟ್ಟಿರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಬಳಕೆಗೆ ಅವಕಾಶ ಮಾಡಿಕೊಡಬೇಕು. ಹಲವು ಕಂಪನಿಗಳು ಬ್ಯಾಂಕ್ಗಳಲ್ಲಿ ಸಾಲ ಮಾಡಿ ಉದ್ಯಮಗಳನ್ನು ಆರಂಭಿಸಿದೆ.