ಪ್ರಧಾನಿ ಮೋದಿಗೆ ಮುತ್ತಿಗೆ ಹಾಕಿದ ಮಕ್ಕಳ ಸೈನ್ಯ!

ಬುಧವಾರ, 15 ಆಗಸ್ಟ್ 2018 (09:10 IST)
ನವದೆಹಲಿ: ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಗೆ ಮಕ್ಕಳ ಪ್ರೀತಿಯ ಅಪ್ಪುಗೆ ದೊರೆಯಿತು.
 

ಭಾಷಣ ಮುಗಿಸಿ ಮರಳುವ ಮೊದಲು ನೇರವಾಗಿ ತ್ರಿವರ್ಣ ಧ್ವಜದ ವೇಷ ಧರಿಸಿ ಶಿಸ್ತಾಗಿ ನಿಂತಿದ್ದ ಮಕ್ಕಳ ಗುಂಪಿನ ಕಡೆಗೆ ಧಾವಿಸಿದ ಪ್ರಧಾನಿ ಮೋದಿಯನ್ನು ತಬ್ಬಿಕೊಳ್ಳಲು, ಕೈ ಕುಲುಕಲು ಮಕ್ಕಳು ಮುಗಿ ಬಿದ್ದರು. ಅರೆಕ್ಷಣ ಪ್ರಧಾನಿ ಮೋದಿ ಮಕ್ಕಳ ನೂಕು ನುಗ್ಗಲು ನಡುವೆ ತಡಬಡಾಯಿಸುವಂತಾಯಿತು. ಭದ್ರತಾ ಸಿಬ್ಬಂದಿಗೂ ಮಕ್ಕಳನ್ನು ನಿಯಂತ್ರಿಸುವುದು ಕಷ್ಟವಾಯಿತು.

ಹಾಗಿದ್ದರೂ ನಗು ನಗುತ್ತಲೇ ಮಕ್ಕಳ ಕೈಕುಲುತ್ತಾ ಮಾತನಾಡಿಸುತ್ತಾ ಅವರ ಜತೆ ಪ್ರಧಾನಿ ಮೋದಿ ಬೆರೆತರು. ಬಳಿಕ ಎನ್ ಸಿಸಿ ಕ್ಯಾಡೆಟ್ ಗಳ ಗುಂಪಿನ ಕಡೆಗೆ ತೆರಳಿ ಕೈ ಬೀಸಿ ಸ್ಥಳದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ