ಸಿಎಂ ಹುದ್ದೆ ಕುಮಾರಸ್ವಾಮಿಗೆ ಸಾಕಾಗಿ ಹೋಗಿದೆಯಂತೆ!

ಸೋಮವಾರ, 30 ಜುಲೈ 2018 (08:46 IST)
ಬೆಂಗಳೂರು: ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕಂಡುಬಂದ ಉತ್ಸಾಹ ಈಗ ಮಾಯವಾಗಿದೆ. ತಮಗೆ ಈ ಹುದ್ದೆ ಸಾಕಾಗಿ ಹೋಗಿದೆ ಎಂದು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ!

ತಮ್ಮ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಕಿರಿ ಕಿರಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇತ್ಯಾದಿ ಸಮಸ್ಯೆಗಳಿಂದ ಸಾಕಾಗಿ ಹೋಗಿದೆ. ಸಿಎಂ ಹುದ್ದೆಯೇ ಬೇಕು ಎಂದು ಅನಿಸುತ್ತಿಲ್ಲ ಎಂದು ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ಖಾಸಗಿ ವಾಹಿನಿ ವರದಿ ಮಾಡಿದೆ.

ಅಧಿಕಾರ ಸ್ವೀಕರಿಸಿದ ಒಂದೇ ವಾರಕ್ಕೆ ಕುಮಾರಸ್ವಾಮಿ ನಾನು ವಿಷಕಂಠನಂತೆ. ಕಹಿಯನ್ನೆಲ್ಲಾ ನುಂಗಿ ನಿಮಗೆ ಸಂತೋಷ ಕೊಡುತ್ತಿದ್ದೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಇದೀಗ ಏನೇ ನಿರ್ಧಾರಗಳು ಕೈಗೊಳ್ಳಬೇಕಿದ್ದರೂ ಎರಡೂ ಪಕ್ಷಗಳ ನಡುವೆ ಸಮನ್ವಯತೆ ಸಾಧಿಸುವಷ್ಟರಲ್ಲಿ ಸಾಕಾಗಿ ಹೋಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ