ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಪರಿಗಣನೆ

ಶನಿವಾರ, 11 ಫೆಬ್ರವರಿ 2023 (11:04 IST)
ಬೆಂಗಳೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಾಡಿದೆ.

ಇನ್ನು ಮುಂದೆ ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಅದನ್ನು ವಿದ್ಯಾರ್ಥಿಗಳ ಅಂಕಕ್ಕೆ ಪರಿಗಣನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 2023ರ ಪರೀಕ್ಷೆಯಿಂದಲೇ ಈ ನಿಯಮ ಜಾರಿ ಬರಲಿದೆ. 

ಇಲ್ಲಿಯವರೆಗೆ ಮರು ಮೌಲ್ಯಮಾಪನದಲ್ಲಿ ಕನಿಷ್ಠ 6 ಅಂಕ ಬಂದರೆ ಮಾತ್ರ ವಿದ್ಯಾರ್ಥಿಗಳ ಅಂಕಕ್ಕೆ ಪರಿಗಣನೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಇನ್ನು ಮುಂದೆ ಒಂದು ಅಂಕ ಬಂದರೂ ಅದನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ