ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ !

ಶುಕ್ರವಾರ, 23 ಡಿಸೆಂಬರ್ 2022 (07:38 IST)
ಹೊಸ ವರ್ಷ ಸಮೀಪಿಸುತ್ತಿದೆ. ನ್ಯೂ ಇಯರ್ ಸಂಭ್ರಮಾಚರಣೆಗೆ ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದರ ಮಧ್ಯೆ ಹಳೇ ವೈರಸ್ ಭೀತಿ ಕೂಡ ಹುಟ್ಟುಕೊಂಡಿದೆ.
 
ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ ಶುರುವಾಗಿದೆ. ಕೊರೊನಾ ಭೀತಿಯಿಂದ ಹೊರಬಂದಿದ್ದ ವಿಶ್ವದ ಜನತೆಗೆ ಈಗ ಮತ್ತೆ ಆತಂಕ ಶುರುವಾಗಿದೆ.

ಹೌದು, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಜೋರಾಗಿದೆ. ಕೊರೊನಾ ಉಪತಳಿಯು ಬಹು ವೇಗವಾಗಿ ದೇಶಾದ್ಯಂತ ಹರಡುತ್ತಿರುವುದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚೀನಾದಲ್ಲಿ ಲಕ್ಷಾಂತರ ಜನ ಸೋಂಕಿಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳು ಫುಲ್ ಆಗಿವೆ. ಸ್ಮಶಾನಗಳಲ್ಲಿ ಹೆಣಗಳ ರಾಶಿ ಕಾಣುತ್ತಿದೆ. ವೈದ್ಯರು ಸಹ ಚಿಕಿತ್ಸೆ ನೀಡುತ್ತಲೇ ಕುಸಿದು ಬೀಳುತ್ತಿದ್ದಾರೆ. ಈ ಭಯಾನಕ ದೃಶ್ಯಗಳು ಜಗತ್ತನ್ನು ಮತ್ತೆ ಕಂಗೆಡಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ